alex Certify
ಕನ್ನಡ ದುನಿಯಾ       Mobile App
       

Kannada Duniya

ಮೃತ್ಯು ಭೀತಿಯಿಂದ ದಿನ ದೂಡುತ್ತಿದ್ದಾರೆ ಈ ಊರಿನ ಜನ

ದಿನ ಬೆಳಗಾದರೆ ಇಂದು ಇನ್ನಾರ ಮನೆಯಲ್ಲಿ ಜವರಾಯ ಅಟ್ಟಹಾಸ ಮೆರೆಯಲಿದ್ದಾನೆ ಎಂಬ ಆತಂಕದಲ್ಲಿ ಉಸಿರು ಬಿಗಿಹಿಡಿದು ಬದುಕುತ್ತಿದ್ದಾರೆ ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕಂಚಿಕೇರಿ ಗ್ರಾಮದ ಜನರು. ಇಂತಹ ಭೀತಿ ಇಡೀ ಊರಿನ ಜನರನ್ನು ಕಾಡುತ್ತಿದೆ. ಹೌದು ಕೇವಲ ಒಂದು ತಿಂಗಳಲ್ಲಿ ಈ ಗ್ರಾಮದಲ್ಲಿ ಬರೋಬ್ಬರಿ 19 ಜನರು ವಿವಿಧ ಕಾರಣಗಳಿಗೆ ಸಾವನ್ನಪ್ಪಿದ್ದಾರೆ.

ಮೂರು ಜನ ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರೆ, ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆರು ಜನ ವಯೋ ಸಹಜ ಕಾಯಿಲೆಯಿಂದ ಮೃತಪಟ್ಟಿದ್ದರೆ, ನಾಲ್ವರು ಕ್ಷುಲ್ಲಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರ ನಡುವೆ ಮರಳುಗಾರಿಕೆ ನಡೆಸುತ್ತಿದ್ದ ವೇಳೆ ತಲೆಬುರುಡೆಗಳ ರಾಶಿಯೇ ದೊರೆತಿವೆ….ಹೀಗೆ ನಾನಾ ಕಾರಣಗಳಿಂದ ಗ್ರಾಮದಲ್ಲಿ ಸರಣಿ ಸಾವುಗಳು ಸಂಭವಿಸುತ್ತಲೇ ಇದೆ. ಇದರಿಂದಾಗಿ ಇಡೀ ಊರಿಗೆ ಊರೇ ಭೀತಿಯಿಂದ ಕಾಲ ಕಳೆಯುವಂತಾಗಿದೆ.

ಗ್ರಾಮದಲ್ಲಿ 5 ವರ್ಷಕ್ಕೊಮ್ಮೆ ಗ್ರಾಮದೇವತೆಯ ಊರ ಹಬ್ಬ ಆಚರಿಸಲಾಗುತ್ತಿತ್ತು. ಆದರೆ ಕಳೆದ ವರ್ಷ ಈ ಆಚರಣೆ ನಡೆಸಲಾಗಿಲ್ಲ. ಇನ್ನು ಗ್ರಾಮದ ನಡು ರಸ್ತೆಯಲ್ಲಿದ್ದ ಕರಿಕಲ್ಲು ಪೂಜೆ ಕೂಡ ನಿಂತುಹೋಗಿದೆ. ಹೀಗಾಗಿ ಇದೆಲ್ಲ ಕಾರಣದಿಂದಾಗಿ ಕಂಚಿಕೇರಿ ಗ್ರಾಮದಲ್ಲಿ ಸಾವಿನ ಸರಣಿ ಆರಂಭವಾಗಿದೆ ಎಂಬುದು ಹಲವರ ನಂಬಿಕೆ. ಈ ನಿಟ್ಟಿನಲ್ಲಿ ಮೃತ್ಯು ಭೀತಿಯಿಂದ ಪಾರಾಗಲು ಈಗ ಊರಿನ ಜನರು ಮೃತ್ಯುಂಜಯ ಹೋಮ ಮಾಡಿಸಲು ನಿರ್ಧರಿಸಿದ್ದಾರೆ. ಸೆ.13ರಂದು ಶ್ರೀಶೈಲ ಜಗದ್ಗುರುಗಳ ಸನ್ನಿಧಾನದಲ್ಲಿ ಮೃತ್ಯುಂಜಯ ಹೋಮ ಗ್ರಾಮದಲ್ಲಿ ನಡೆಯಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...