alex Certify
ಕನ್ನಡ ದುನಿಯಾ       Mobile App
       

Kannada Duniya

ನೀರಿನ ಟ್ಯಾಂಕ್ ನಲ್ಲಿತ್ತು ಬೃಹತ್ ಗಾತ್ರದ ಕಾಳಿಂಗ ಸರ್ಪ

ಚಿಕ್ಕಮಗಳೂರು: ಕಾಳಿಂಗ ಸರ್ಪದ ಹೆಸರು ಕೇಳಿದ್ರೇನೆ ಎಂತವರಿಗೂ ಭಯ ಹುಟ್ಟಿಸುತ್ತೆ. ಅಂತದ್ರಲ್ಲಿ ಬರೋಬ್ಬರಿ 18 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪವೊಂದು ಮನೆಯ ನೀರಿನ ಟ್ಯಾಂಕ್ ನಲ್ಲಿ ತಣ್ಣನೆ ಮಲಗಿತ್ತು ಎಂದರೆ ಹೇಗಿರಬೇಡ?

ಹೌದು. ಮೂಡಿಗೆರೆ ತಾಲೂಕಿನ ಗುತ್ತಿಹೆಸಗೋಡಿನ ವಕೀಲ ಮಹೇಂದ್ರ ಎಂಬುವವರ ಮನೆಯ ನೀರಿನ ಟ್ಯಾಂಕ್ ನಲ್ಲಿ ಭಯಂಕರ ಕಾಳಿಂಗ ಸರ್ಪ ಪತ್ತೆಯಾಗಿದೆ.

ಕಾಳಿಂಗ ಸರ್ಪದ ಗಾತ್ರವನ್ನು ನೋಡಿದ ಗ್ರಾಮಸ್ಥರು ಕಂಗಾಲಾಗಿದ್ದಾರೆ. ತಕ್ಷಣ ಮನೆಯವರು ಸ್ನೇಕ್ ಆರೀಫ್ ಹಾಗೂ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಸ್ನೇಕ್ ಆರೀಫ್ ಹಾಗೂ ಅರಣ್ಯ ಸಿಬ್ಬಂದಿ ಕಾಳಿಂಗವನ್ನು ಸೆರೆಹಿಡಿದಿದ್ದಾರೆ.

ಸುಮಾರು 45 ನಿಮಿಷ ಕಾರ್ಯಾಚರಣೆ ನಡೆಸಿ ಹಿಡಿದ ಕಾಳಿಂಗ ಸರ್ಪವನ್ನು ಅರಣ್ಯ ಇಲಾಖೆ ನೇತೃತ್ವದಲ್ಲಿ ಚಾರ್ಮಾಡಿ ಅರಣ್ಯಕ್ಕೆ ಬಿಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...