alex Certify
ಕನ್ನಡ ದುನಿಯಾ       Mobile App
       

Kannada Duniya

ಬಂಧನ ಭೀತಿ: ಖಾಸಗಿ ವಿಮಾನದಲ್ಲಿ ದೇಶ ತೊರೆದ ಮಲ್ಯ

mallya1-kJAH--621x414@LiveMint

ಒಂದೇ ಕಂತಿನಲ್ಲಿ ಸಾಲ ತೀರಿಸುತ್ತೇನೆ ಎಂದಿದ್ದ ಮದ್ಯ ದೊರೆ ವಿಜಯ್ ಮಲ್ಯ ಇದೀಗ ಖಾಸಗಿ ವಿಮಾನದಲ್ಲಿ ದೇಶ ಬಿಟ್ಟು ಪರಾರಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಹೌದು. ಮಲ್ಯ ಅವರಿಗೆ ನೀಡಿದ್ದ ಸಾಲ ಮರು ಪಾವತಿಯಾಗದ ಹಿನ್ನಲೆಯಲ್ಲಿ ಎಸ್ ಬಿ ಐ ಮುಂದಾಳತ್ವದಲ್ಲಿ 17 ಬ್ಯಾಂಕ್ ಗಳು ಬೆಂಗಳೂರಿನ ಸಾಲ ವಸೂಲಾತಿ ನ್ಯಾಯಾಧೀಕರಣದ ಮೊರೆ ಹೋಗಿ ಸಾಲ ವಸೂಲಾತಿಗೆ ಆಸ್ತಿ ಜಫ್ತಿ ಮಾಡುವಂತೆ ಹಾಗೂ ಮಲ್ಯ ಅವರ ಪಾಸ್ ಪೋರ್ಟ್ ಅನ್ನೂ ಸಹ ವಶಕ್ಕೆ ಪಡೆಯುವಂತೆ ಮನವಿ ಮಾಡಲಾಗಿತ್ತು.

ಈ ನಡುವೆ ಎಸ್ ಬಿ ಐ ಸೇರಿದಂತೆ 17 ಬ್ಯಾಂಕ್‍ಗಳು ಸುಪ್ರಿಂ ಕೋರ್ಟ್‍ಗೆ ಅರ್ಜಿ ಹಾಕಿದ್ದು, ಈ ಅರ್ಜಿ ವಿಚಾರಣೆ ಇಂದು ನಡೆಯಲಿದೆ. ಒಂದೊಮ್ಮೆ ಸುಪ್ರೀಂ ತೀರ್ಪು, ಮಲ್ಯ ವಿರುದ್ಧ ಬಂದ ಪಕ್ಷದಲ್ಲಿ ಮಲ್ಯ ಅವರನ್ನು ಬಂಧಿಸುವ ಸಾಧ್ಯತೆಯೂ ಇದ್ದು ಹೀಗಾಗಿ ವಿಜಯ್ ಮಲ್ಯ ದೇಶಬಿಟ್ಟು ಹೋಗಿದ್ದಾರೆ ಎನ್ನಲಾಗುತ್ತಿದೆ.

ಕೆಲ ಮಾಹಿತಿಗಳ ಪ್ರಕಾರ 30 ಬ್ಯಾಗ್ ಗಳ ಜತೆ ವಿಜಯ ಮಲ್ಯ ಖಾಸಗಿ ವಿಮಾನದ ಮೂಲಕ ದೇಶ ತೊರೆದಿದ್ದು, ಆ ವಿಮಾನದಲ್ಲಿ ಕೆಲವು ರಾಜಕಾರಣಿಗಳು, ಪತ್ರಕರ್ತರು, ಬ್ಯಾಂಕರ್ ಗಳು, ಉದ್ಯಮಿಗಳೂ ಸಹ ಇದ್ದರು ಎನ್ನಲಾಗಿದ್ದು, ಆ ಬ್ಯಾಗ್ ನಲ್ಲಿ ಏನಿತ್ತು ಎಂಬುದು ಮಾತ್ರ ನಿಗೂಢವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...