alex Certify
ಕನ್ನಡ ದುನಿಯಾ       Mobile App
       

Kannada Duniya

ಟಾಯ್ಲೆಟ್ ನಿರ್ಮಾಣಕ್ಕಾಗಿ ಉಪವಾಸ ಹೋರಾಟ ಮಾಡಿದ್ಲು ಬಾಲಕಿ

ಮನೆಯಲ್ಲಿ ಶೌಚಾಲಯ ಕಟ್ಟಿಸಲು 7ನೇ ತರಗತಿಯ ಬಾಲಕಿಯೊಬ್ಬಳು ಬಳ್ಳಾರಿಯಲ್ಲಿ 2 ದಿನ ಉಪವಾಸ ಹೋರಾಟ ಮಾಡಿದ್ದಾಳೆ. ಸಿರಗುಪ್ಪಾ ತಾಲೂಕಿನ ತಾಲೂರ್ ಎಂಬ ಗ್ರಾಮದ ವಿದ್ಯಾರ್ಥಿನಿ ಎಚ್. ಮಂಕಾಳಿ ಎರಡು ದಿನಗಳ ಕಾಲ ಅನ್ನ ನೀರು ಸೇವಿಸಿರಲಿಲ್ಲ.

ಗ್ರಾಮ ಪಂಚಾಯ್ತಿ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರದಲ್ಲಿ ಶೌಚಾಲಯದ ಮಹತ್ವದ ಬಗ್ಗೆ ಮಂಕಾಳಿ ತಿಳಿದುಕೊಂಡಿದ್ಲು. 2015-16ರಲ್ಲೇ ಬಾಲಕಿಯ ಕುಟುಂಬಕ್ಕೆ ಶೌಚಾಲಯ ಮಂಜೂರಾಗಿತ್ತು. ಆದ್ರೆ ಅನುದಾನ ಮಾತ್ರ ಬಂದಿರಲಿಲ್ಲ. ಹಾಗಾಗಿ ಟಾಯ್ಲೆಟ್ ಕಟ್ಟಿಸಿರಲಿಲ್ಲ.

ಶೌಚಾಲಯದ ಮಹತ್ವ ತಿಳಿದ ಮಂಕಾಳಿ ಮನೆಗೆ ಬಂದವಳೇ ಶೌಚಾಲಯ ಕಟ್ಟಿಸಬೇಕೆಂದು ಹಠ ಹಿಡಿದಿದ್ದಾಳೆ. ಟಾಯ್ಲೆಟ್ ಕಟ್ಟುವ ವರೆಗೂ ಅನ್ನ-ನೀರು ಸೇವಿಸುವುದಿಲ್ಲ ಅಂತಾ ಉಪವಾಸ ಕುಳಿತಿದ್ದಾಳೆ. ಪರೀಕ್ಷೆ ಹತ್ತಿರ ಬಂದಿದ್ದು, ಆರೋಗ್ಯ ಹದಗೆಡಬಹುದೆಂದು ಹೆತ್ತವರು ಎಚ್ಚರಿಸಿದ್ರೂ ಕ್ಯಾರೇ ಎಂದಿಲ್ಲ.

ಪಂಚಾಯ್ತಿ ಅಧಿಕಾರಿಗಳೆಲ್ಲ ಬಂದು ಉಪವಾಸ ಕೈಬಿಡುವಂತೆ ಬಾಲಕಿಯ ಮನವೊಲಿಸಲು ಪ್ರಯತ್ನಿಸಿದ್ರು. ಆದ್ರೆ ಮಂಕಾಳಿ ಮಾತ್ರ ಹಠ ಬಿಡಲಿಲ್ಲ. ಕೊನೆಗೆ ವಿಧಿಯಿಲ್ಲದೇ ಪಂಚಾಯ್ತಿ ಅಧಿಕಾರಿಗಳು ಟಾಯ್ಲೆಟ್ ನಿರ್ಮಿಸಿಕೊಟ್ಟಿದ್ದಾರೆ. ಆದ್ರೆ ಬಾಲಕಿ ಮಾಡಿದ ಉಪವಾಸ ಹೋರಾಟ ಗ್ರಾಮದಲ್ಲಿ ಭಾರೀ ಮೆಚ್ಚುಗೆ ಗಳಿಸಿದೆ. ಶಾಲಾ ಶಿಕ್ಷಕರಿಗೂ ಹೆಮ್ಮೆ ತಂದಿದ್ದಾಳೆ ಮಂಕಾಳಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...