alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿದೆ ಕರ್ನಾಟಕವೇ ಬೆಚ್ಚಿ ಬೀಳುವ ಸುದ್ದಿ

maldivs

ಕರ್ನಾಟಕ ಭಯೋತ್ಪಾದಕರ ನೆಲೆವೀಡಾಗುತ್ತಿದೆ. ಅವರ ಕಾರ್ಯಚಟುವಟಿಕೆಗಳಿಗೆ ಸುರಕ್ಷಿತ ತಾಣವಾಗಿದೆ ಎಂಬ ಮಾತುಗಳು ಆಗಾಗ ಕೇಳಿಬರುತ್ತವೆ. ಇದಕ್ಕೆ ಪೂರಕವಾದ ಘಟನೆಯೊಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

12 ಮಂದಿ ಐಸಿಸ್ ಸೇರಲು ಬೆಂಗಳೂರಿನಿಂದ ಪ್ರಯಾಣ ಬೆಳೆಸಿದ್ದಾರೆ. ಮಾಲ್ಡೀವ್ಸ್ ಮೂಲದ ಕುಟುಂಬವೊಂದರ 12 ಮಂದಿ ಕಳೆದ ಡಿಸೆಂಬರ್ 13ರಂದು ಕತಾರ್ ಏರ್ ವೇಸ್ ನಲ್ಲಿ ಬೆಂಗಳೂರಿನಿಂದ ದೋಹಾ ಮೂಲಕ ಸಿರಿಯಾಕ್ಕೆ ಪ್ರಯಾಣ ಬೆಳೆಸಿದ್ದಾರೆ. ಇವರೆಲ್ಲಾ ಮೆಡಿಕಲ್ ವೀಸಾ ಪಡೆದುಕೊಂಡು ಕರ್ನಾಟಕಕ್ಕೆ ಆಗಮಿಸಿದ್ದರಾದರೂ, ಯಾವುದೇ ಮೆಡಿಕಲ್ ಸೆಂಟರ್ ಸಂಪರ್ಕಿಸಿಲ್ಲ. ಬದಲಿಗೆ ಇಲ್ಲಿಂದ ಐಸಿಸ್ ಸೇರಲು ಹೋಗಿದ್ದಾರೆ. ಬೆಂಗಳೂರಿನಿಂದ ಇಸ್ತಾನ್ ಬುಲ್ ತಲುಪಿ ಬಳಿಕ ತಮ್ಮ ಪ್ರಯಾಣ ಮುಂದುವರೆಸಿದ್ದಾರೆ.

ಆತಂಕಕಾರಿ ಸಂಗತಿ ಎಂದರೆ, ಹೀಗೆ ಕರ್ನಾಟಕದ ಮೂಲಕ ಐಸಿಸ್ ಸೇರಲು ಹೋಗಿರುವ ತಂಡದ ಒಬ್ಬ ಸದಸ್ಯ ಪೈಲಟ್ ಆಗಿದ್ದಾನೆ. ಅಬ್ದುಲ್ಲಾ ಮುಬಾರಕ್ ಎಂಬಾತ ಅಮೆರಿಕದ ಮಿಯಾಮಿ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಡಿಪಾರ್ಟ್ ಮೆಂಟ್ ನಿಂದ ಪೈಲಟ್ ತರಬೇತಿ ಪಡೆದಿದ್ದಾನೆ.

9/11ರ ಮಾದರಿಯಲ್ಲಿ ಐಸಿಸ್ ದಾಳಿ ಮಾಡಬಹುದಾದ ಸಾಧ್ಯತೆ ಕೂಡ ಇರಬಹುದೆಂದು ಹೇಳಲಾಗಿದೆ. ನೆರೆ ರಾಷ್ಟ್ರಗಳ ಯುವಕರು ಐಸಿಸ್ ಸೇರಲು ಭಾರತದ ಮೂಲಕ ಹೋಗುತ್ತಿರುವುದು ತಿಳಿದುಬಂದಿದ್ದು, ಇದು ಆತಂಕಕಾರಿ ಬೆಳವಣಿಗೆಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...