alex Certify ಕರ್ನಾಟಕ ಬಜೆಟ್ 2021-22 | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕರ್ನಾಟಕ ಬಜೆಟ್ 2021-22

ಬೆಂಗಳೂರು: ಆರ್ಥಿಕ ಬಿಕ್ಕಟ್ಟಿನ ನಡುವೆಯೂ ಸಿಎಂ ಬಿ.ಎಸ್.ಯಡಿಯೂರಪ್ಪ 2,43,734 ಕೋಟಿ ಗಾತ್ರದ ಬಜೆಟ್ ಮಂಡಿಸುತ್ತಿದ್ದು, ಮಂಕು ತಿಮ್ಮನ ಕಗ್ಗದ ’ಕಲ್ಲಾಗು ಬೆಟ್ಟದಡಿ ಮನದಿ ಮಲ್ಲಿಗೆಯಾಗು…’ಸಾಲುಗಳನ್ನು ಸ್ಮರಿಸುತ್ತಾ ಆಯವ್ಯಯ ಮಂಡಿಸಿದ್ದು ವಿಶೇಷವಾಗಿತ್ತು.

ಬಜೆಟ್ ಪ್ರಮುಖಾಂಶ:

* ಅಂತರಾಷ್ಟ್ರೀಯ ಮಹಿಳಾದಿನಾಚರಣೆ ಹಿನ್ನೆಲೆಯಲ್ಲಿ ಮಹಿಳೆಯರಿಗೆ ಭರ್ಜರಿ ಗಿಫ್ಟ್- 2 ಕೋಟಿ ರೂಪಾಯಿವರೆಗೆ ಸಾಲ ಸೌಲಭ್ಯ
* ಬಿಎಂಟಿಸಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಬಸ್ ಪಾಸ್
* ಬೆಂಗಳೂರಿನಲ್ಲಿ ನಿರ್ಭಯಾ ಯೋಜನೆಯಡಿ 7500, ಮಹಿಳೆಯರಿಗೆ ಗೋದಾಮು, ಅಂಗಡಿ ನಿರ್ಮಾಣಕ್ಕೆ ಸಹಾಯ ಸೇರಿ ವಿವಿಧ ಯೋಜನೆ ಘೋಷಣೆ
* ಫ್ಲ್ಯಾಟ್ ಗಳ ಮುದ್ರಾಂಕ ಶುಲ್ಕ ಶೇ.5ರಿಂದ ಶೇ.3ಕ್ಕೆ ಇಳಿಕೆ
* ಪೆಟ್ರೋಲ್-ಡೀಸೆಲ್ ದರ ಯಥಾಸ್ಥಿತಿ
* ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿಗೆ 200 ಕೋಟಿ ಅನುದಾದ
* ರಾಜ್ಯದಲ್ಲಿ ಹೊಸದಾಗಿ 52 ಬಸ್ ಸ್ಟ್ಯಾಂಡ್ ಸ್ಥಾಪಸುವುದಾಗಿ ಘೋಷಣೆ
* ಎಸ್.ಎಲ್ ಭೈರಪ್ಪನವರ ಪರ್ವ ನಾಟಕ ಪ್ರದರ್ಶನಕ್ಕೆ ಬಜೆಟ್ ನಲ್ಲಿ ಕೋಟಿ ಮೀಸಲು
* ಗೋಹತ್ಯೆ ತಡೆಯಲು ಜಿಲ್ಲೆಗೊಂದು ಗೋಶಾಲೆ ನಿರ್ಮಾಣ
* ಬೆಂಗಳೂರು ಹೆಸರಘಟ್ಟದಲ್ಲಿ 100 ಎಕರೆ ಥೀಮ್ ಪಾರ್ಕ್ ನಿರ್ಮಾಣ
* ನಂದಿ ಗುರ್ಗ್ ಮೇಕೆ ತಳಿಗಳ ಅಭಿವೃದ್ಧಿಗೆ 1 ಕೋಟಿ ರೂ. ಅನುದಾನ
* ಶಿವಮೊಗ್ಗ ಪಶು ವೈದ್ಯಕೀಯ ಕಾಲೇಜಿನಲ್ಲಿ 2 ಕೋಟಿ ವೆಚ್ಚದಲ್ಲಿ ಆಯುರ್ವೇದ ಔಷದಿ ಅಳವಡಿಕೆ ಕೇಂದ್ರ ಸ್ಥಾಪನೆ
* ಕ್ರೀಡಾ ವಿಜ್ನಾನ ಕೇಂದ್ರ ಸ್ಥಾಪನೆಗೆ 2 ಕೋಟಿ ಅನುದಾನ
* ಮಂಡ್ಯ ನಗರ ಕ್ರೀಡಾಂಗಣ ಉನ್ನತೀಕರಣಕ್ಕೆ 10 ಕೋಟಿ
* ಜಕ್ಕೂರಿನಲ್ಲಿರುವ ವೈಮಾನಿಕ ತರಬೇತಿ ಶಾಲೆಗೆ 2 ಕೋಟಿ
* ಪ್ರವಾಸಿ ತಾಣಗಳ ಮೂಲ ಸೌಕರ್ಯಕ್ಕೆ 500 ಕೋಟಿ
* ಕಬಿನಿ ಡ್ಯಾಮ್ ಕೆಳಭಾಗ ಪಾರ್ಕ್ ಸ್ಥಾಪನೆಗೆ 50 ಕೋಟಿ

ಕಾಂಗ್ರೆಸ್ ವಿರೋಧದ ನಡುವೆಯೇ ಬಜೆಟ್ ಮಂಡನೆ; ಕೈ ಸದಸ್ಯರ ಸಭಾತ್ಯಾಗ; ಬಿಜೆಪಿಯಿಂದ ಜೈ ಶ್ರೀರಾಮ್ ಘೋಷಣೆ

* ಮಹದಾಯಿ ಕಳಸಾ-ಬಂಡೂರಿ ನಾಲಾ ತಿರುವು ಯೋಜನೆಗೆ ಅನುದಾನ.
* ಮಹದಾಯಿ ಯೋಜನೆಗೆ 1677 ಕೋಟಿ ರೂಪಾಯಿ ಅನುದಾನ ನೀಡಿಕೆ
* ಭದ್ರಾ ಮೇಲ್ದಂಡೆ ಯೋಜನೆಯ ಅಂದಾಜು ಮೊತ್ತಕ್ಕೆ 21,474 ಕೋಟಿ ರೂ ಆಡಳಿತಾತ್ಮಕ ಅನುಮೋದನೆ
* ಕೃಷ್ಣಾ ಭಾಗ್ಯ ಜಲನಿಗಮ 5600 ಕೋಟಿ ರೂ ಅನುದಾನ
* ಬೆಂಗಳೂರು ಸಮಗ್ರ ಅಭಿವೃದ್ಧಿಗೆ 7795 ಕೋಟಿ ರೂ ಅನುದಾನ
* ಬೆಂಗಳೂರು ವಿಷನ್ 2022 ಅಡಿಯಲ್ಲಿ ಬೆಂಗಳೂರಿಗೆ ನವ ಚೈತನ್ಯ ಕಾರ್ಯಕ್ರಮ ಜಾರಿಗೊಳಿಸಿ, ಬೆಂಗಳೂರಿನ ಮಲ್ಲೇಶ್ವರಂನ ಮೈಸೂರು ಲ್ಯಾಂಪ್ಸ್ ಪ್ರದೇಶದಲ್ಲಿ ಎಕ್ಸ್
* ಪೀರಿಯನ್ಸ್ ಬೆಂಗಳೂರು ಕೇಂದ್ರ ಸ್ಥಾಪನೆ
* ಬೆಂಗಳೂರು ಉಪನಗರ ರೈಲು ಯೋಜನೆಗೆ 850 ಕೋಟಿ ರೂ ಮೀಸಲು
* ಜಿಲ್ಲಾ ಕೇಂದ್ರಗಳಲ್ಲಿ ಮೆಟ್ರಿಕ್ ನಂತರದ 50 ಹಾಸ್ಟೆಲ್ ಸ್ಥಾಪನೆ ಮಾಡಲು 50 ಕೋಟಿ ರೂ ಅನುದಾನ
* ರಾಜ್ಯದಲ್ಲಿ 4 ವಿಭಾಗಗಳಲ್ಲಿ ಮುರಾರ್ಜಿ ವಸತಿ ಶಾಲೆ ಆರಂಭ
* 100 ಕಿತ್ತೂರು ರಾಣಿ ಶಿಶುಪಾಲನಾ ಕೇಂದ್ರ ಸ್ಥಾಪನೆ
* ರಾಜ್ಯದಲ್ಲಿ 25 ಸಂಚಾರಿ ಆರೋಗ್ಯ ತಪಾಸಣಾ ಕೇಂದ್ರ ಸ್ಥಾಪನೆ
* ಅಯೋಧ್ಯೆ ಶ್ರೀರಾಮ ಜನ್ಮಭೂಮಿಯಲ್ಲಿ ಕರ್ನಾಟಕದ ಯಾತ್ರಿ ನಿವಾಸ ನಿರ್ಮಾಣಕ್ಕೆ 10 ಕೋಟಿ ಅನುದಾನ
* ಆದಿಚುಂಚನಗಿರಿ ನಾಥ ಪಾರಂಪರಿಕ ಕೇಂದ್ರಕ್ಕೆ 10 ಕೋಟಿ ಮೀಸಲು

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...