alex Certify ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಭರ್ಜರಿ ಗುಡ್ ನ್ಯೂಸ್: 16,000ಕ್ಕೂ ಅಧಿಕ ಮಂದಿ ನೇಮಕಕ್ಕೆ ಮುಂದಾದ ‘ಮಿಂತ್ರಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಭರ್ಜರಿ ಗುಡ್ ನ್ಯೂಸ್: 16,000ಕ್ಕೂ ಅಧಿಕ ಮಂದಿ ನೇಮಕಕ್ಕೆ ಮುಂದಾದ ‘ಮಿಂತ್ರಾ

ಕೊರೊನಾ ಕಾರಣಕ್ಕಾಗಿ ಕಳೆದ ಎರಡು ವರ್ಷಗಳಿಂದ ಕಳೆಗುಂದಿದ್ದ ಹಬ್ಬ ಹರಿದಿನಗಳು, ಇದೀಗ ಸೋಂಕು ಇಳಿಮುಖವಾಗಿರುವ ಹಿನ್ನೆಲೆಯಲ್ಲಿ ಮತ್ತೆ ಎಂದಿನ ವೈಭವವನ್ನು ಪಡೆದುಕೊಂಡಿವೆ. ಹೀಗಾಗಿ ಮಾರುಕಟ್ಟೆಯಲ್ಲಿ ಹೊಸ ಉತ್ಸಾಹ ಕಂಡುಬಂದಿದ್ದು, ವಾಹನಗಳು, ಫ್ಯಾಶನ್ ಉತ್ಪನ್ನಗಳ ಮಾರಾಟದಲ್ಲಿ ಹೆಚ್ಚಳ ಕಂಡು ಬಂದಿದೆ.

ಈ ಬೆಳವಣಿಗೆಗಳ ಮಧ್ಯೆ ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಪ್ರಖ್ಯಾತ ಫ್ಯಾಷನ್ ಬ್ರಾಂಡ್ ಮಿಂತ್ರಾ ಗುಡ್ ನ್ಯೂಸ್ ನೀಡಿದೆ. ಪ್ರಮುಖ ಹಬ್ಬಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ 16,000ಕ್ಕೂ ಅಧಿಕ ಮಂದಿಯ ನೇಮಕಕ್ಕೆ ಮಿಂತ್ರಾ ಮುಂದಾಗಿದ್ದು, ಈ ಪೈಕಿ 10,000 ಹುದ್ದೆಗಳು ನೇರ ನೇಮಕಗಳಾಗಿವೆ. ಉಳಿದ 6000 ಮಂದಿ ಪರೋಕ್ಷವಾಗಿ ಕಾರ್ಯನಿರ್ವಹಿಸಲಿದ್ದಾರೆ.

ಕಳೆದ ವರ್ಷವೂ ಮಿಂತ್ರಾ ಹಬ್ಬದ ಸಂದರ್ಭದಲ್ಲಿ 11,000 ಮಂದಿಯನ್ನು ನೇಮಕ ಮಾಡಿಕೊಂಡಿದ್ದು, ಆದರೆ ಕೇವಲ 7000 ಮಂದಿ ಮಾತ್ರ ನೇರ ನೇಮಕಕ್ಕೆ ಒಳಪಟ್ಟಿದ್ದರು. ಪ್ರಸ್ತುತ ಮಾರುಕಟ್ಟೆಯಲ್ಲಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮಿಂತ್ರಾ ದೊಡ್ಡ ಮಟ್ಟದ ನೇಮಕಕ್ಕೆ ಮುಂದಾಗಿದ್ದು, ಇದರ ಜೊತೆಗೆ ತನ್ನ ಗ್ರಾಹಕ ಸ್ನೇಹಿ ಉದ್ಯೋಗಿಗಳಿಗೆ ಅವರು ಪಡೆಯುವ ರೇಟಿಂಗ್ ಆಧಾರದ ಮೇಲೆ ವಿಶೇಷ ಪ್ರೋತ್ಸಾಹ ಧನವನ್ನು ಸಹ ನೀಡುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...