alex Certify
ಕನ್ನಡ ದುನಿಯಾ       Mobile App
       

Kannada Duniya

ದೇವರು ಕರೆಯುತ್ತಿದ್ದಾನೆ ಎಂದೇಳಿ ಬಾವಿಗೆ ಹಾರಿ ಸಾವು ಕಂಡ ಯುವಕ

suicide_deep_well

ನನ್ನನ್ನು ದೇವರು ಕರಿಯುತ್ತಿದ್ದಾನೆ ಎಂದು ಹೇಳುತ್ತಿದ್ದ ಯುವಕನೊಬ್ಬ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಸವಕಲ್ಯಾಣ ತಾಲೂಕಿನ ಕಾಂಬಳೆವಾಡಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಗೋಪಿನಾಥ ಸುಧಾಕರ ಪಾಂಚಾಳ (25) ಮೃತ ಯುವಕ. ಬಿಎಬಿಎಡ್ ಪದವೀಧರನಾಗಿದ್ದ ಈತ, ನನ್ನನ್ನು ಮೇಲೆ ಬಾ ಎಂದು ದೇವರು ಕರಿಯುತ್ತಿದ್ದಾನೆ. ನಾನು ಹೋಗಬೇಕಾಗಿದೆ ಎಂದು ಮನೆಯವರಲ್ಲಿ ಸದಾ ಹೇಳುತಿದ್ದ ಎನ್ನಲಾಗಿದೆ.

ಆದರೆ ಸ್ನೇಹಿತರು, ಕುಟುಂಬಸ್ಥರು ಈತನ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳದೇ ಇದ್ದು, ಇದೀಗ ಬಾವಿಗೆ ಹಾರಿ ಸಾವಿಗೆ ಶರಣಾಗಿದ್ದಾನೆ. ಸಿಪಿಐ ಶಿವಾನಂದ ಪವಾಡಶಟ್ಟಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಮಂಠಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...