alex Certify
ಕನ್ನಡ ದುನಿಯಾ       Mobile App
       

Kannada Duniya

ಗೌರಿ ಲಂಕೇಶ್ ಹತ್ಯೆ: ತನಿಖಾಧಿಕಾರಿಗಳಿಂದ ಪ್ರಕರಣದ ಮರುಸೃಷ್ಟಿ

 

ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ನಡೆದಿದ್ದ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳದ ಅಧಿಕಾರಿಗಳು, ಹೆಚ್ಚಿನ ಮಾಹಿತಿ ಪಡೆಯುವ ಸಲುವಾಗಿ ಹತ್ಯೆ ಆರೋಪಿ ಪರಶುರಾಮ ವಾಗ್ಮೋರೆ ಜೊತೆ ಪ್ರಕರಣದ ಮರುಸೃಷ್ಟಿ ಮಾಡಿಸಿದ್ದಾರೆ.

ಶುಕ್ರವಾರ ಸಂಜೆ ಗೌರಿ ಲಂಕೇಶ್ ಮನೆ ಬಳಿ ಪರಶುರಾಮನನ್ನು ಕರೆದುಕೊಂಡು ಹೋಗಿದ್ದ ಅಧಿಕಾರಿಗಳು, ಗುಂಡು ಹಾರಿಸುವ ಮುನ್ನ ಆತ ಕಾದು ನಿಂತಿದ್ದ ಸ್ಥಳ, ಮನೆಗೆ ಬಂದ ರೀತಿ ಎಲ್ಲವನ್ನು ಮರು ಸೃಷ್ಟಿಸಿದ್ದಾರೆ.

ತಾನು ಕೃತ್ಯ ಎಸಗಿದ ಸಂಪೂರ್ಣ ಮಾಹಿತಿಯನ್ನು ತನಿಖಾಧಿಕಾರಿಗಳಿಗೆ ನೀಡಿದ ಪರಶುರಾಮ್ ವಾಗ್ಮೋರೆ ಗೌರಿ ಲಂಕೇಶ್ ಮೇಲೆ 4 ಗುಂಡು ಹಾರಿಸಿದ ಬಳಿಕ ಜೊತೆಗೆ ಬಂದಿದ್ದವನ ಬೈಕ್ ಏರಿ ಕುಳಿತೆ ಎಂದು ತಿಳಿಸಿದ್ದಾನೆನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...