alex Certify
ಕನ್ನಡ ದುನಿಯಾ       Mobile App
       

Kannada Duniya

ಕೊನೆ ದಿನಗಳಲ್ಲಿ ಮೌನಕ್ಕೆ ಶರಣಾಗಿದ್ದರು ಅನಂತ ಕುಮಾರ್…!

ಕೇಂದ್ರ ಸಚಿವ ಅನಂತ ಕುಮಾರ್ ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಅನಂತ ಕುಮಾರ್ ಅವರ ಅಕಾಲಿಕ ನಿಧನ ಕೇವಲ ರಾಜ್ಯದ ಜನತೆಗೆ ಮಾತ್ರವಲ್ಲ ಅವರೊಂದಿಗೆ ಒಡನಾಟ ಹೊಂದಿದ್ದ ಹಿರಿಯ ರಾಜಕೀಯ ನಾಯಕರುಗಳಿಗೂ ಆಘಾತ ತಂದಿದೆ.

ಕೆಲ ತಿಂಗಳುಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಅನಂತ ಕುಮಾರ್ ಇದಕ್ಕಾಗಿ ವಿದೇಶದಲ್ಲಿ ಚಿಕಿತ್ಸೆ ಪಡೆದುಕೊಂಡು ಬಂದಿದ್ದರು. ಅಲ್ಲಿಂದ ಮರಳಿದ ಬಳಿಕ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ತಾವು ಗುಣಮುಖರಾಗಿ ಆಸ್ಪತ್ರೆಯಿಂದ ಮರಳಿ ಬರುವ ಕುರಿತು ಅತೀವ ವಿಶ್ವಾಸ ಹೊಂದಿದ್ದ ಅನಂತ ಕುಮಾರ್, ತಮ್ಮ ಭೇಟಿಗೆ ಬಂದಿದ್ದ ರಾಜಕೀಯ ನಾಯಕರೊಂದಿಗೆ, ಕೆಲವರು ಮುಂದಿನ ಲೋಕಸಭಾ ಚುನಾವಣೆ ವೇಳೆಗೆ ನಾನಿರುವುದಿಲ್ಲವೆಂದು ಹೇಳುತ್ತಿದ್ದಾರಂತೆ. ಆದರೆ ಕೆಲ ದಿನಗಳಲ್ಲೇ ಗುಣಮುಖನಾಗಿ ಬರುತ್ತೇನೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದರಂತೆ.

ಆದರೆ ದಿನ ಕಳೆದಂತೆ ತಮ್ಮ ಆರೋಗ್ಯ ಹದಗೆಡುತ್ತಾ ಹೋದಾಗ ಅನಂತ ಕುಮಾರ್ ಅವರು ಮೌನಕ್ಕೆ ಶರಣಾಗಿದ್ದರಂತೆ. ಅಲ್ಲದೆ ತಮ್ಮ ಸಾವು ಸನಿಹದಲ್ಲಿದೆ ಎಂಬ ಭಾವವೂ ಅವರಲ್ಲಿತ್ತಂತೆ. ಇಂದು ಅನಂತ ಕುಮಾರ್, ಬಾರದ ಲೋಕಕ್ಕೆ ತೆರಳಿದ್ದು, ಇದೀಗ ಅವರು ನೆನಪು ಮಾತ್ರ.

Related News

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...