alex Certify
ಕನ್ನಡ ದುನಿಯಾ       Mobile App
       

Kannada Duniya

2016- 17 ನೇ ಸಾಲಿನ ರಾಜ್ಯ ಬಜೆಟ್ ಮುಖ್ಯಾಂಶಗಳು

siddaramaiah-budget

ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಧಾನಸಭೆಯಲ್ಲಿ 2016- 17 ನೇ ಸಾಲಿನ ರಾಜ್ಯ ಬಜೆಟ್ ಮಂಡಿಸಿದ್ದಾರೆ. ಮುಖ್ಯಮಂತ್ರಿಯಾಗಿ ಇದು ಸಿದ್ದರಾಮಯ್ಯನವರ ನಾಲ್ಕನೇ ಬಜೆಟ್ ಮಂಡನೆಯಾಗಿದೆ.

ಇದರಿಂದಾಗಿ ಸಿದ್ದರಾಮಯ್ಯನವರು ಒಟ್ಟು 11 ಬಾರಿ ಬಜೆಟ್ ಮಂಡನೆ ಮಾಡಿದಂತಾಗಿದ್ದು, ಇದು ದಾಖಲೆಯಾಗಿದೆ. ಸಿದ್ದರಾಮಯ್ಯನವರು ರಾಹುಕಾಲದಲ್ಲಿ ಬಜೆಟ್ ಮಂಡನೆ ಮಾಡಿರುವುದು ಈ ಬಾರಿಯ ವಿಶೇಷವಾಗಿದೆ.

ಬಜೆಟ್ ಮುಖ್ಯಾಂಶಗಳು ಇಂತಿದೆ.

‘ಸುವರ್ಣ ಕೃಷಿ ಯೋಜನೆ’ ಆರಂಭ, ಯೋಜನೆಯಡಿಯಲ್ಲಿ 100 ಮಾದರಿ ಕೃಷಿ ಗ್ರಾಮಗಳ ಅಭಿವೃದ್ದಿಗೆ ಯೋಜನೆ.

ಕೃಷಿಕರಿಗೆ ಹವಾಮಾನ ಮುನ್ಸೂಚನೆ ನೀಡುವ ಯೋಜನೆಗೆ 3 ಕೋಟಿ ರೂ. ಅನುದಾನ.

ಕೃಷಿ ಪತ್ತಿನ ಸಹಕಾರ ಸಂಘಗಳೆಲ್ಲವೂ ಗಣಕೀಕರಣಗೊಳಿಸಲು ಕ್ರಮ.

ಕೃಷಿ ವಿಶ್ವ ವಿದ್ಯಾನಿಲಯಗಳ ಮೂಲಕ ರೈತರಿಗೆ ಅಲ್ಪಾವಧಿ ತರಬೇತಿ.

4,346 ಕೋಟಿ ರೂ. ಕೃಷಿ ಕ್ಷೇತ್ರಕ್ಕೆ ನೀಡಲಾಗುವುದು.

ದ್ವಿದಳ ಧಾನ್ಯ ಅಭಿಯಾನ ಆರಂಭ.

ಮನರಂಜನಾ ತೆರಿಗೆ ಶೇ.6 ರಷ್ಟು ಏರಿಕೆ.

ಡಿಟಿಹೆಚ್ ಸೇವೆ ಮತ್ತಷ್ಟು ದುಬಾರಿ.

ಸಾಫ್ಟ್ ಡ್ರಿಂಕ್ಸ್ ಮೇಲಿನ ತೆರಿಗೆ ಏರಿಕೆ.

ಭತ್ತ, ಅಕ್ಕಿ, ಬೇಳೆ ಕಾಳು, ಗೋಧಿಗೆ ತೆರಿಗೆ ವಿನಾಯಿತಿ.

ಕಾಗದ ಉತ್ಪನ್ನಗಳಿಗೆ ತೆರಿಗೆ ವಿನಾಯಿತಿ.

ಏರೋಸ್ಪೇಸ್ ಉದ್ಯಮ ಪ್ರೋತ್ಸಾಹಿಸಲು ಸರ್ಕಾರದ ಕ್ರಮ.

ವೈದ್ಯಕೀಯ ಉಪಕರಣಗಳ ಮೇಲಿನ ತೆರಿಗೆ ಇಳಿಕೆ.

ಸೆಟ್ ಟಾಪ್ ಬಾಕ್ಸ್ ಗಳ ಮೇಲಿನ ತೆರಿಗೆಯಲ್ಲಿ ಇಳಿಕೆ.

ಎಲ್ ಇ ಡಿ ಬಲ್ಬ್ ಗಳ ಮೇಲಿನ ತೆರಿಗೆ ಕಡಿಮೆ.

ಹತ್ತಿ ಮೇಲಿನ ತೆರಿಗೆ ಕಡಿಮೆಗೊಳಿಸಲು ಸರ್ಕಾರದ ನಿರ್ಧಾರ.

ತೋಟದ ಬೆಳೆಗಳ ಮೇಲಿನ ಕೃಷಿ ವರಮಾನ ತೆರಿಗೆ ರದ್ದು.

ವ್ಯಾಪಾರ, ಉದ್ದಿಮೆ ನೋಂದಣಿ ಪತ್ರ ಮೂರು ದಿನಗಳಲ್ಲೇ ಲಭ್ಯ.

ಬಿಯರ್ ಮೇಲಿನ ಅಬಕಾರಿ ಸುಂಕ 5 ರೂ. ನಿಂದ 10 ರೂ. ಗಳಿಗೆ ಏರಿಕೆ.

ಮದ್ಯ ಮಾರಾಟ ಲೈಸೆನ್ಸ್ ಶುಲ್ಕ ಶೇ.25 ರಷ್ಟು ಹೆಚ್ಚಳ.

ಒಪ್ಪಂದ ವಾಹನ ತೆರಿಗೆ 1000 ರೂ. ನಿಂದ 1,500 ರೂ. ಗಳಿಗೆ ಏರಿಕೆ.

ಕಾಫಿ, ಟೀ, ರಬ್ಬರ್ ಬೆಳೆಗಳ ಮೇಲಿನ ವರಮಾನ ತೆರಿಗೆ ರದ್ದು.

ಲಕ್ಸುರಿ ಖಾಸಗಿ ವಾಹನಗಳ ತೆರಿಗೆ ಏರಿಸಿದ ಸರ್ಕಾರ. ಪ್ರತಿ ಸೀಟ್ ಗೆ 600 ರೂ. ನಿಂದ 900 ರೂ. ಗಳಿಗೆ ಏರಿಕೆ.

ವಿದ್ಯುತ್ ಚಾಲಿತ ವಾಹನಕ್ಕೆ ಸಂಪೂರ್ಣ ತೆರಿಗೆ ವಿನಾಯಿತಿ.

ಬಯಲು ಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆಗಾಗಿ ತಜ್ಞರ ಸಮಿತಿ ರಚನೆ.

ಹೋಬಳಿ ಮಟ್ಟದಲ್ಲಿ 125 ಹೊಸ ವಸತಿ ಶಾಲೆಗಳ ಆರಂಭ.

ಹಂಪಿ ವಿವಿ ಯಲ್ಲಿ ಮಹರ್ಷಿ ವಾಲ್ಮೀಕಿ ಅಧ್ಯಯನ ಪೀಠ.

ಸರ್ಕಾರಿ ಕಾಲೇಜುಗಳಿಗೆ 10 ಕೋಟಿ ರೂ. ಅನುದಾನ.

ನೀರಾವರಿ ಯೋಜನೆಗಳಿಗೆ 3 ಸಾವಿರ ಕೋಟಿ ರೂ. ಮೀಸಲು.

ಬೀದರ್ ನಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್ ಸ್ಥಾಪನೆ.

ಕರ್ನಾಟಕ ಚಿತ್ರಕಲಾ ಪರಿಷತ್ ಗೆ 1.5 ಕೋಟಿ ರೂ. ಅನುದಾನ.

2016-17 ನೇ ಸಾಲಿನಲ್ಲಿ ಬಿಡಿಎ ನಿಂದ 3 ಸಾವಿರ ಹೊಸ ಫ್ಲಾಟ್ ಗಳ ನಿರ್ಮಾಣ.

ಬೆಳಗಾವಿ, ಬಿಜಾಪುರ ಹಾಗೂ ವಿಜಯಪುರದಲ್ಲಿ ಐಟಿ ಪಾರ್ಕ್ ಸ್ಥಾಪನೆ.

ದೇಶದಲ್ಲೇ ಮೊದಲ ಬಾರಿ 4 ಸಾವಿರ ಸರ್ಕಾರಿ ಸೇವೆಗಳು ಮೊಬೈಲ್ ನಲ್ಲಿ ಲಭ್ಯ.

ಬೆಂಗಳೂರಿನ ಪ್ರತಿ ವಾರ್ಡ್ ನಲ್ಲಿ ‘ಬೆಂಗಳೂರು ಒನ್’ ಸ್ಥಾಪನೆ.

ಕಾರವಾರ, ಚಾಮರಾಜ ನಗರ ಹಾಗೂ ಮಡಿಕೇರಿಯಲ್ಲಿ ಹೊಸ ಮೆಡಿಕಲ್ ಕಾಲೇಜ್ ಸ್ಥಾಪನೆ.

ರಾಯಚೂರಿನ ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮೇಲ್ದರ್ಜೆಗೆ.

ಎಂಬಿಬಿಎಸ್ ಪ್ರವೇಶ ಮಿತಿ 100 ರಿಂದ 150 ಸೀಟುಗಳಿಗೆ ಏರಿಕೆ.

ಬಿಬಿಎಂಪಿ ಗೆ ಮುಂದಿನ 2 ವರ್ಷಗಳಲ್ಲಿ 5 ಸಾವಿರ ಕೋಟಿ ರೂ.

ಬೆಂಗಳೂರಿನ ನಾಲ್ಕು ಪ್ರಮುಖ ರಸ್ತೆಗಳಲ್ಲಿ ಸಿಗ್ನಲ್ ಫ್ರೀ ಕಾರಿಡಾರ್.

ಬೆಂಗಳೂರಿನ ಕೆರೆಗಳ ಅಭಿವೃದ್ದಿಗೆ 100 ಕೋಟಿ ರೂ. ಮೀಸಲು

ಯಲಹಂಕದಲ್ಲಿ ಅನಿಲ ಆಧಾರಿತ ವಿದ್ಯುತ್ ಉತ್ಪಾದನಾ ಘಟಕ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...