alex Certify
ಕನ್ನಡ ದುನಿಯಾ       Mobile App
       

Kannada Duniya

ತ್ರಿಶಂಕು ವಿಧಾನಸಭೆ, ತಲೆನೋವಾದ ಸಮೀಕ್ಷೆ

ವಿಧಾನಸಭೆ ಚುನಾವಣೆಯ ಮತದಾನ ಪೂರ್ವ ಸಮೀಕ್ಷೆ ನಡೆಸಲಾಗಿದ್ದು, ಅತಂತ್ರ ವಿಧಾನಸಭೆ ಫಲಿತಾಂಶ ಬರುವ ಸಾಧ್ಯತೆ ಇದೆ. ಇತ್ತೀಚೆಗೆ ಇಂಡಿಯಾ ಟುಡೇ–ಕಾರ್ವಿ ನಡೆಸಿದ ಸಮೀಕ್ಷೆಯಲ್ಲೂ ಅತಂತ್ರ ವಿಧಾನಸಭೆ ಫಲಿತಾಂಶದ ಬಗ್ಗೆ ಹೇಳಲಾಗಿತ್ತು.

ಟೈಮ್ಸ್ ನೌ –ವಿ.ಎಂ.ಆರ್. ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಕಾಂಗ್ರೆಸ್ 91, ಬಿ.ಜೆ.ಪಿ. 89, ಜೆ.ಡಿ.ಎಸ್. 40 ಇತರರು 4 ಸ್ಥಾನಗಳಲ್ಲಿ ಜಯಗಳಿಸುವ ಸಾಧ್ಯತೆ ಇದೆ.

ಇತ್ತೀಚಿನ ವರ್ಷಗಳಲ್ಲಿ ಮತದಾನ ಪೂರ್ವ ಮತ್ತು ಮತದಾನೋತ್ತರ ಸಮೀಕ್ಷೆಗಳು ಭಾರೀ ಮಹತ್ವ ಪಡೆದುಕೊಂಡಿವೆ. ಸಮೀಕ್ಷೆಗಳು ಆಯಾ ಸಂದರ್ಭಕ್ಕೆ ತಕ್ಕಂತೆ ಜನಾಭಿಪ್ರಾಯವಾಗಿರುತ್ತದೆ. ಆದರೆ, ಅದೇ ಪರಮ ಸತ್ಯವಲ್ಲ ಎನ್ನುವುದು ಬಹುತೇಕರ ಅಭಿಪ್ರಾಯವಾಗಿದೆ.

ಸಮೀಕ್ಷೆಗಳ ಪ್ರಕಾರ ಕಾಂಗ್ರೆಸ್ ಅಥವಾ ಬಿ.ಜೆ.ಪಿ. ದೊಡ್ಡ ಪಕ್ಷಗಳಾಗಿ ಹೊರ ಹೊಮ್ಮಿದರೂ, ಅಧಿಕಾರ ರಚಿಸಲು ಬಹುಮತ ಗಳಿಸುವುದಿಲ್ಲ. ಜೆ.ಡಿ.ಎಸ್. ಕಿಂಗ್ ಮೇಕರ್ ಆಗುವುದು ನಿಶ್ಚಿತವಾಗಿದೆ.

ಈ ಮೊದಲೇ ಹೇಳಿದಂತೆ ಪೂರ್ಣ ಬಹುಮತದೊಂದಿಗೆ ಅಧಿಕಾರ ರಚಿಸುವುದಾಗಿ ಕಾಂಗ್ರೆಸ್, ಬಿ.ಜೆ.ಪಿ. ಹಾಗೂ ಜೆ.ಡಿ.ಎಸ್. ನಾಯಕರು ಹೇಳಿದ್ದಾರೆ. ಸಮೀಕ್ಷೆಗಳಲ್ಲಿ ಅತಂತ್ರ ವಿಧಾನಸಭೆ ಬಗ್ಗೆ ಹೇಳಿರುವುದು ನಾಯಕರಿಗೆ ತಲೆ ನೋವಾಗಿದೆ. ಸಮೀಕ್ಷೆಗಳೇ ಸತ್ಯವಲ್ಲ, ಒಮ್ಮೊಮ್ಮೆ ಸಮೀಕ್ಷೆ ನಿಖರವಾಗಿದ್ದರೆ, ಮತ್ತೊಮ್ಮೆ ವ್ಯತಿರಿಕ್ತವಾದ ಫಲಿತಾಂಶ ಬಂದಿದೆ. ಸಮೀಕ್ಷೆಯೇ ಅಂತಿಮವಲ್ಲ, ಚುನಾವಣೆಗೆ ಇನ್ನೂ ಸಮಯವಿದೆ. ರಾಜಕೀಯ ಪಕ್ಷಗಳು ತಮ್ಮ ಕಾರ್ಯತಂತ್ರ ಬದಲಿಸಿಕೊಂಡು ಪರಿಣಾಮಕಾರಿ ಪ್ರಚಾರ ನಡೆಸಿದಲ್ಲಿ ಚಿತ್ರಣ ಬದಲಾಗಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...