alex Certify
ಕನ್ನಡ ದುನಿಯಾ       Mobile App
       

Kannada Duniya

ಸಂಕ್ರಾಂತಿಯ ಶುಭ ದಿನದಂದು ಬದಲಾಗಿದೆ ‘ಕನ್ನಡ ದುನಿಯಾ’

Kannada_Duniya_Logo

‘ಕನ್ನಡ ದುನಿಯಾ’ ಓದುಗರಿಗೆಲ್ಲಾ ಸಂಕ್ರಾಂತಿ ಹಬ್ಬದ ಶುಭಾಶಯಗಳು. ಇಂದಿನಿಂದ ಹೊಸ ರೂಪ, ವಿನ್ಯಾಸದಲ್ಲಿ ‘ಕನ್ನಡ ದುನಿಯಾ’ ನಿಮಗೆ ಕಾಣ ಸಿಗುತ್ತಿದೆ. ಸಂಕ್ರಾಂತಿಯಂದು ಸೂರ್ಯ ತನ್ನ ಪಥ ಬದಲಿಸಿದಂತೆ ನಾವೂ ಹೊಸ ವಿನ್ಯಾಸದೊಂದಿಗೆ ಪಥ ಬದಲಿಸಿದ್ದೇವೆ.

ಆದರೆ, ನಮ್ಮ, ಬದ್ಧತೆ ಅದೇ ರೀತಿ ಮುಂದುವರೆಯಲಿದೆ. ಈಗಂತೂ ಸ್ಮಾರ್ಟ್ ಯುಗ. ಸ್ಮಾರ್ಟ್ ಫೋನ್ ಬಳಕೆಯೂ ಹೆಚ್ಚಾಗಿದೆ. ‘ಕನ್ನಡ ದುನಿಯಾ’ ವನ್ನು ಕೂಡ ಮೊಬೈಲ್ ಸ್ನೇಹಿಯಾಗಿ ರೂಪಿಸಲಾಗಿದೆ. ಹೊಸತನದ ಜೊತೆಗೆ ಓದುಗರ ಹಿತ ಮನಗಂಡು ಈ ಹೊಸತನಕ್ಕೆ ಮುಂದಡಿ ಇಟ್ಟಿದ್ದೇವೆ. ಸ್ಮಾರ್ಟ್ ಫೋನ್ ಗಳಲ್ಲಿ ಅತ್ಯುತ್ತಮ ವೀಕ್ಷಣೆಗೆ ‘ಕನ್ನಡ ದುನಿಯಾ’ ಲಭ್ಯವಾಗುವಂತೆ ರೂಪಿಸಿದ್ದು, ಮುಂದಿನ ದಿನಗಳಲ್ಲಿ ಶಿಕ್ಷಣ, ತಂತ್ರಜ್ಞಾನ, ವಿಜ್ಞಾನ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ವಿಭಾಗ ಆರಂಭಿಸುವ ಚಿಂತನೆ ನಮ್ಮದು.

ಸಂಕ್ರಾಂತಿಯಂದು ಬದಲಾದ ರೂಪದಲ್ಲಿ ಮೂಡಿಬರುತ್ತಿರುವ ‘ಕನ್ನಡ ದುನಿಯಾ’ ನಿಮ್ಮ ನಿರೀಕ್ಷೆಗೆ ತಕ್ಕಂತೆ ಇನ್ನಷ್ಟು ಕಾಳಜಿಯಿಂದ ಕಾರ್ಯ ನಿರ್ವಹಿಸುವ ಜೊತೆಗೆ ಕನಸುಗಳನ್ನು ಹೊತ್ತು ಸಾಗಲಿದೆ. ಇಷ್ಟುದಿನ ನೀವು ತೋರಿದ ಪ್ರೀತಿ- ವಿಶ್ವಾಸವೇ ನಮ್ಮ ಯಶಸ್ಸಿಗೆ ಕಾರಣ. ಮುಂದೆಯೂ ನಿಮ್ಮ ಪ್ರೀತಿ, ವಿಶ್ವಾಸ ಹೀಗೆಯೇ ಮುಂದುವರೆಯಲಿ.

ಕನ್ನಡ ದುನಿಯಾ ಬಳಗ

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...