alex Certify
ಕನ್ನಡ ದುನಿಯಾ       Mobile App
       

Kannada Duniya

ಹೊಸ ರೂಪು, ವಿಭಿನ್ನತೆಯ ಜತೆಗೆ ‘ಕನ್ನಡ ದುನಿಯಾ’

KannadaDunia

ಇತಿಹಾಸ ಇಲ್ಲದಿರುವುದಕ್ಕೆ ಭವಿಷ್ಯವೂ ಇರಲ್ಲ ಎಂಬ ಮಾತಿದೆ. ಯಾವುದೇ ಕ್ಷೇತ್ರದಲ್ಲಿ ಬದಲಾವಣೆ ಸಹಜ ನಿಯಮ. ಹಿಂದಿನ ನೆನಪುಗಳೊಂದಿಗೆ ಬಂದ ಹಾಗೂ ಬರಲಿರುವ ಹೊಸದನ್ನು ಸ್ವೀಕರಿಸುತ್ತಾ ಮುಂದೆ ಸಾಗುವುದು ಈಗಿನ ವಾಸ್ತವ. ಪ್ರಸ್ತುತ ಆಧುನಿಕ ಯುಗದಲ್ಲಿ ಬದಲಾವಣೆ ಅನಿವಾರ್ಯ ಕೂಡ.

ಕಾಲ ಉರುಳಿದಂತೆ ಚಿತ್ರಣವೂ ಬದಲಾಗುತ್ತದೆ. ಅದರಲ್ಲೂ ಈಗಿನ ಸ್ಮಾರ್ಟ್ ಯುಗದಲ್ಲಿ ಪ್ರತಿಯೊಂದು ಸ್ಮಾರ್ಟ್ ಆಗಿರಬೇಕೆಂಬ ನಿರೀಕ್ಷೆ ಸಹಜವಾಗಿಯೇ ಹೆಚ್ಚಾಗಿರುತ್ತದೆ. ತಂತ್ರಜ್ಞಾನದ ಕ್ಷಣಕ್ಷಣದ ಆವಿಷ್ಕಾರಗಳಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ನಾವೂ ಬದಲಾಗಿದ್ದೇವೆ. ಇಷ್ಟು ದಿನ ನೀವು ನೋಡುತ್ತಿದ್ದ ‘ಕನ್ನಡ ದುನಿಯಾ’ ಇನ್ನು ಮುಂದೆ ಹೊಸ ರೂಪದಲ್ಲಿ ಮೂಡಿ ಬರುತ್ತಿದೆ. ವಿಭಿನ್ನ ಮಾರ್ಪಾಡುಗಳ ಜತೆ ನಮ್ಮ ಎಂದಿನ ನೇರ, ನಿಷ್ಪಕ್ಷಪಾತ ಸುದ್ದಿಗಳನ್ನು ಯಾವುದೇ ಮುಲಾಜಿಲ್ಲದೇ ನಿಮ್ಮ ಮುಂದಿಡಲಿದ್ದೇವೆ.

ಮೊದಲಿಗೆ ನಿಮಗೊಂದು ಮಾತು ಹೇಳಬೇಕು. ನಮ್ಮ ಇಷ್ಟು ದಿನದ ಹಾದಿಯಲ್ಲಿ ಎದುರಾಗಿದ್ದು ಹಲವಾರು ಸಮಸ್ಯೆಗಳು. ಎಷ್ಟೇ ಸಮಸ್ಯೆಗಳೆದುರಾದರೂ ನೀವು ತೋರಿದ ಪ್ರೀತಿ, ವಿಶ್ವಾಸ ಎದುರಾದ ಸಮಸ್ಯೆಗಳನ್ನು ಮಂಜಿನಂತೆ ಕರಗಿಸಿದ್ದು ಸುಳ್ಳಲ್ಲ.

ಇಂದು ನಿಮ್ಮೆಲ್ಲರ ಆ ಅಭಿಮಾನವೇ ‘ಕನ್ನಡ ದುನಿಯಾ’ ಅಲೆಕ್ಸಾ ರ್ಯಾಂಕಿಂಗ್ ಪಟ್ಟಿಯಲ್ಲಿ ಭಾರತದಲ್ಲಿ ‘5,105’ ನೇ ಹಾಗೂ ವಿಶ್ವದಲ್ಲಿ ‘52,804’ ನೇ ಸ್ಥಾನದಲ್ಲಿದೆ. ಇಷ್ಟಕ್ಕೆ ನಮ್ಮ ಪರಿಶ್ರಮ ಸಾರ್ಥಕ ಎಂದು ಭಾವಿಸುವುದಿಲ್ಲ. ನಾವು ಸಾಗಬೇಕಾದ ದಾರಿ ಮತ್ತು ತಲುಪುವ ಗುರಿ ಇನ್ನೂ ಬಹಳಷ್ಟು ಇದೆ.

ನಮ್ಮ ಪರಿಶ್ರಮ, ನಮ್ಮ ಹೆಜ್ಜೆಯಲ್ಲಿ ನೀವು ಕೂಡ ಜೊತೆಯಾಗಿ ಕೈ ಹಿಡಿದು ಮುನ್ನಡೆಸಿದ್ದೀರಿ. ಇನ್ನು ಮುಂದೆಯೂ ನಿಮ್ಮ ಪ್ರೀತಿ- ವಿಶ್ವಾಸ ಹೀಗೆಯೇ ಇರಲಿ. ನಾವು ಬದಲಾಗಿರಬಹುದು. ಆದರೆ, ನಮ್ಮ ಕಾಳಜಿ, ಬದ್ಧತೆ ಹಾಗೆಯೇ ಇರುತ್ತದೆ ಎಂಬುದನ್ನು ಹೇಳಲು ನಾವು ಮರೆಯುವುದಿಲ್ಲ. ಹೊಸ ರೂಪದಲ್ಲಿ ಬಂದಿರುವ ನಿಮ್ಮ ‘ಕನ್ನಡ ದುನಿಯಾ’ ವನ್ನು ಎಂದಿನಂತೆಯೇ ಪ್ರೋತ್ಸಾಹಿಸುತ್ತೀರಿ ಎಂಬ ನಂಬಿಕೆ ನಮ್ಮದು.

ಇಂತಿ
ನಿಮ್ಮ ‘ಕನ್ನಡ ದುನಿಯಾ’ ಬಳಗ

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...