alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಟ್ಟ ಮಾತನ್ನು ತಪ್ಪದೇ ನಡೆಸಿಕೊಟ್ಟಿದ್ದರು ಕಲಾಂ

7161kalam-2ಭಾರತದ ಹೆಮ್ಮೆಯ ಪುತ್ರ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ನಿಧನರಾಗಿದ್ದರೂ ಜನಮಾನಸದಲ್ಲಿ ಚಿರಸ್ಥಾಯಿಯಾಗಿದ್ದಾರೆ. ಮಂಗಳೂರಿನ ಹುಡುಗಿಗೆ ಕಲಾಂ ನೀಡಿದ ಭರವಸೆಯನ್ನು ಈಡೇರಿಸಿದ್ದು, ಅಂತಹ ದೃಷ್ಟಾಂತಗಳ ಪೈಕಿ ಒಂದು.

ಈಗ ಕಾಲೇಜಿನಲ್ಲಿ ಓದುತ್ತಿರುವ ಬಿ.ಹೆಚ್. ತನ್ವಿ ರಾವ್ ಪುಟ್ಟ ಬಾಲಕಿಯಾಗಿದ್ದಾಗ ದ.ರಾ. ಬೇಂದ್ರೆ ಹಾಗೂ ಚನ್ನವೀರ ಕಣವಿಯವರ ಕವನಗಳಿಗೆ ಹೆಜ್ಜೆ ಹಾಕಿದ್ದರು. ಇದರ ಸಿ.ಡಿ.ಯನ್ನು ಅಂದು ರಾಷ್ಟ್ರಪತಿಗಳಾಗಿದ್ದ ಅಬ್ದುಲ್ ಕಲಾಂ ಅವರಿಗೆ ಕಳುಹಿಸಿಕೊಡಲಾಗಿತ್ತು. ಕೆಲ ದಿನಗಳಲ್ಲೇ ಅವರಿಗೆ ರಾಷ್ಟ್ರಪತಿ ಭವನದಿಂದ ಪತ್ರವೊಂದು ಬಂದಿದ್ದು, ಸಿ.ಡಿ. ಕಳುಹಿಸಿದ್ದಕ್ಕೆ ಅಬ್ದುಲ್ ಕಲಾಂ ಧನ್ಯವಾದ ಹೇಳಿದ್ದರಲ್ಲದೇ ತನ್ವಿ ರಾವ್ ಅವರಿಗೆ ಶುಭ ಹಾರೈಸಿದ್ದರು.

ಆದಾದ ಕೆಲ ತಿಂಗಳುಗಳ ಬಳಿಕ ತನ್ವಿ ರಾವ್ ರಾಷ್ಟ್ರೀಯ ನೃತ್ಯ ಸ್ಪರ್ಧೆ ಸಲುವಾಗಿ ನವದೆಹಲಿಗೆ ತೆರಳಿದ್ದು, ಅದಕ್ಕೂ ಮುನ್ನ ಕಲಾಂ ಅವರಿಗೆ ಪತ್ರ ಬರೆದಿದ್ದ ತನ್ವಿ, ಭೇಟಿಯಾಗುವ ಇಚ್ಚೆ ಪ್ರಕಟಿಸಿದ್ದರು. ತನ್ವಿ ರಾವ್ ದೆಹಲಿಯಲ್ಲಿದ್ದ ವೇಳೆ ರಾಷ್ಟ್ರಪತಿ ಭವನದಿಂದ ಕರೆ ಬಂದಿದ್ದು, ಸುನಾಮಿ ಸಂಭವಿಸಿರುವ ಕಾರಣ ರಾಷ್ಟ್ರಪತಿ ಕಲಾಂ ಅವರು ತುರ್ತು ಸಭೆಯಲ್ಲಿ ಭಾಗವಹಿಸಬೇಕಾಗಿದ್ದು, ಭೇಟಿ ಸಾಧ್ಯವಾಗುವುದಿಲ್ಲವೆಂದು ಹೇಳಲಾಗಿತ್ತಲ್ಲದೇ ಕಲಾಂ ಮುಂದೆ ಮಂಗಳೂರಿಗೆ ಭೇಟಿ ನೀಡಿದ ವೇಳೆ ತನ್ವಿ ರಾವ್ ರನ್ನು ಭೇಟಿ ಮಾಡುವುದಾಗಿ ಹೇಳಿದ್ದಾರೆಂದು ಅತ್ತ ಕಡೆಯಿಂದ ಮಾತನಾಡಿದ್ದ ವ್ಯಕ್ತಿ ತಿಳಿಸಿದ್ದರು.

ಆದಾದ 5 ವರ್ಷಗಳ ಬಳಿಕ ಅಂದರೆ 25 ಫೆಬ್ರವರಿ 2009 ರಂದು ಅಬ್ದುಲ್ ಕಲಾಂ ಅವರು ಮಂಗಳೂರಿಗೆ ಭೇಟಿ ನೀಡಿದ ವೇಳೆ ತನ್ವಿ ರಾವ್ ಅವರ ತಂದೆ ಹರಿಪ್ರಸಾದ್ ರಾವ್ ಅವರಿಗೆ ಕರೆ ಬಂದಿದ್ದು, 9 ಗಂಟೆಗೆ ಅಬ್ದುಲ್ ಕಲಾಂ ಅವರು ಸರ್ಕಿಟ್ ಹೌಸ್ ನಲ್ಲಿ ಭೇಟಿ ಮಾಡಲಿದ್ದಾರೆಂದು ತಿಳಿಸಲಾಯಿತು. ಇದರಿಂದ ಒಂದು ಕ್ಷಣ ತನ್ವಿ ರಾವ್ ಕುಟುಂಬ ದಿಗ್ಬ್ರಮೆಗೊಳಗಾಯಿತು. ಐದು ವರ್ಷಗಳ ಹಿಂದೆ ಕಲಾಂ ಅವರು ನೀಡಿದ್ದ ಭರವಸೆಯಂತೆ ಕರೆ ಮಾಡಿದ್ದು ಅವರನ್ನು ಅಶ್ಚರ್ಯಚಕಿತರನ್ನಾಗಿ ಮಾಡಿತ್ತು. ಕೊನೆಗೆ ತನ್ವಿ ರಾವ್ ತಮ್ಮ ತಂದೆ ಜೊತೆ ತೆರಳಿ ಕಲಾಂ ಅವರನ್ನು ಭೇಟಿಯಾಗಿದ್ದು, ಈ ವೇಳೆ ಆಕೆಯ ನೃತ್ಯದ ಆಲ್ಬಂ ನೋಡಿದ ಕಲಾಂ ಮೆಚ್ಚುಗೆ ವ್ಯಕ್ತಪಡಿಸಿದ್ದರು. ತನ್ವಿ ರಾವ್ ನೀಡಿದ ನೃತ್ಯದ ವಿಸಿಡಿ ಯನ್ನು ಪಡೆದ ಕಲಾಂ, ಉಜ್ವಲ ಭವಿಷ್ಯಕ್ಕಾಗಿ ಶುಭ ಕೋರಿದ್ದರು. ಇಂದಿಗೂ ಆ ಸನ್ನಿವೇಶವನ್ನು ನೆನಪಿಸಿಕೊಂಡು ತನ್ವಿ ರಾವ್ ಭಾವುಕರಾಗುತ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...