alex Certify
ಕನ್ನಡ ದುನಿಯಾ       Mobile App
       

Kannada Duniya

ವೋಟ್ ಹಾಕುವ ವಿದ್ಯಾರ್ಥಿಗಳಿಗೆ ಇಂಟರ್ ನೆಟ್ ಉಚಿತ

ಬೆಂಗಳೂರು: ಮತದಾನದ ಪ್ರಮಾಣ ಹೆಚ್ಚಳಕ್ಕೆ ಚುನಾವಣಾ ಆಯೋಗ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅದೇ ರೀತಿ ಹಲವು ಸಂಘಟನೆಗಳು ಜಾಗೃತಿ ಕಾರ್ಯಕ್ರಮ ನಡೆಸಿವೆ.

ವೋಟ್ ಮಾಡುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಇಂಟರ್ ನೆಟ್ ಸೇವೆ ಹಾಗೂ ರಿಯಾಯಿತಿ ದರದಲ್ಲಿ ದಿನಸಿ ಸಾಮಗ್ರಿಗಳನ್ನು ನೀಡುವುದಾಗಿ ಬೆಂಗಳೂರಿನ ಸಂಘಟನೆಯೊಂದು ಘೋಷಿಸಿದೆ.

ಯುವಕರಲ್ಲಿ ಮತದಾನದ ಜಾಗೃತಿ ಮೂಡಿಸುವ ಉದ್ದೇಶ ಹಾಗೂ ಮತದಾನ ಪ್ರಮಾಣವನ್ನು ಹೆಚ್ಚಿಸುವ ಉದ್ದೇಶದಿಂದ ರಾಜಾಜಿನಗರದ ಜನಪ್ರಿಯ ಪಬ್ಲಿಕ್ ವಾಯ್ಸ್ ಜಡ್ಜ್ ಮೆಂಟ್ ಸಂಘಟನೆ ಈ ಕ್ರಮ ಕೈಗೊಂಡಿದೆ. ನವರಂಗ್ ಚಿತ್ರಮಂದಿರದ ಬಳಿ ಇರುವ ಜನಪ್ರಿಯ ಬ್ರೌಸಿಂಗ್ ಸೆಂಟರ್ ಮತ್ತು ದಿನಸಿ ಅಂಗಡಿಯಲ್ಲಿ ಸೌಲಭ್ಯವನ್ನು ಪಡೆಯಬಹುದಾಗಿದೆ.

ಮತದಾನದ ದಿನದಂದು ಬೆರಳಿನ ಗುರುತಿಗೆ ಹಾಕುವ ಶಾಯಿ ತೋರಿಸಿ ವಿದ್ಯಾರ್ಥಿಗಳು 25 ಪೈಸೆ ದರದಲ್ಲಿ ಜೆರಾಕ್ಸ್ ಮಾಡಿಸಿಕೊಳ್ಳಬಹುದು. ಅಲ್ಲದೇ 1 ಗಂಟೆ ಉಚಿತವಾಗಿ ಇಂಟರ್ ನೆಟ್ ಸೇವೆ ಪಡೆಯಬಹುದಾಗಿದೆ. ನಾಗರಿಕರಿಗೆ ಶೇ. 20 ರಿಂದ ಶೇ. 40 ರಷ್ಟು ರಿಯಾಯಿತಿ ದರದಲ್ಲಿ ದಿನಸಿ ಸಾಮಗ್ರಿ ನೀಡಲಾಗುವುದು ಎಂದು ಸಂಘಟನೆಯ ಮುಖ್ಯಸ್ಥ ವಿಶ್ವೇಶ್ವರ ಶರ್ಮ ಅಯ್ಯರ್ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...