alex Certify
ಕನ್ನಡ ದುನಿಯಾ       Mobile App
       

Kannada Duniya

ಯುಟ್ಯೂಬ್ ನಿಂದ 10 ಸಾವಿರ ಸಿಬ್ಬಂದಿ ನೇಮಕ….

ಹಿಂಸಾತ್ಮಕ ಮತ್ತು ನಿಂದನಾತ್ಮಕ ವಿಡಿಯೋಗಳನ್ನು ಯುಟ್ಯೂಬ್ ನಿಂದ ತೆಗೆದು ಹಾಕಲು 10,000 ಕ್ಕೂ ಹೆಚ್ಚು ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗ್ತಿದೆ. ಕೆಲವರು ಯುಟ್ಯೂಬ್ ಅನ್ನು ದುರುಪಯೋಗಪಡಿಸಿಕೊಳ್ತಿದ್ದಾರೆ. ಇತರರನ್ನು ನಿಂದಿಸಲು, ತೊಂದರೆ ಉಂಟುಮಾಡಲು ಯುಟ್ಯೂಬ್ ಅನ್ನು ಅಸ್ತ್ರವನ್ನಾಗಿ ಮಾಡಿಕೊಂಡಿದ್ದಾರೆ.

ಹಾಗಾಗಿ ಅವುಗಳನ್ನೆಲ್ಲ ಕಿತ್ತೊಗೆಯುವ ಅಗತ್ಯವಿದೆ ಅಂತಾ ಯುಟ್ಯೂಬ್ ಸಿಇಓ ಸುಸಾನ್ ವೋಜ್ಸಿಕ್ಕಿ ತಿಳಿಸಿದ್ದಾರೆ. ಅಸಭ್ಯ ವಿಡಿಯೋಗಳು ಹರಿದಾಡ್ತಿವೆ ಅನ್ನೋ ಕಾರಣಕ್ಕೆ ಕಳೆದ ಮಾರ್ಚ್ ನಲ್ಲಿ ಬ್ರಿಟನ್ ಸರ್ಕಾರ ತನ್ನ ಜಾಹೀರಾತನ್ನು ಯುಟ್ಯೂಬ್ ನಿಂದ ಹಿಂಪಡೆದಿತ್ತು.

ಭಯೋತ್ಪಾದಕರಿಗೆ ಸಂಬಂಧಪಟ್ಟ ವಿಡಿಯೋಗಳನ್ನೆಲ್ಲ ಅಪ್ಲೋಡ್ ಮಾಡಿದ್ದ ಕಾರಣ 2 ಗಂಟೆಗಳೊಳಗೆ ಕಿತ್ತೊಗೆಯುವಂತೆ ಬ್ರಿಟನ್ ಪ್ರಧಾನಿ ಥೆರೆಸಾ ಮೇ ಸೂಚನೆ ನೀಡಿದ್ದರು. ಅದಾದ ಬಳಿಕ 150,000ಕ್ಕೂ ಅಧಿಕ ಆಕ್ಷೇಪಾರ್ಹ ವಿಡಿಯೋಗಳನ್ನು ಯುಟ್ಯೂಬ್ ಡಿಲೀಟ್ ಮಾಡಿತ್ತು.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...