alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ಪೈಡರ್ ಮ್ಯಾನ್ ಪ್ರಕರಣ: ಇಲ್ಲಿದೆ ನಿಮ್ಮೆಲ್ಲಾ ಪ್ರಶ್ನೆಗಳಿಗೆ ಉತ್ತರ

ಪ್ಯಾರಿಸ್ ನಲ್ಲಿ ಐದನೇ ಅಂತಸ್ತಿನಿಂದ ಬೀಳುತ್ತಿದ್ದ ಬಾಲಕನನ್ನು ಯುವಕನೊಬ್ಬ, ತನ್ನ ಪ್ರಾಣವನ್ನು ಲೆಕ್ಕಿಸದೆ ಕ್ಷಣಾರ್ಧದಲ್ಲಿ ಕಟ್ಟಡದ ಮೇಲೇರಿ ರಕ್ಷಿಸಿದ ಪ್ರಕರಣ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಯುವಕನ ಸಾಹಸವನ್ನು ಮೆಚ್ಚಿ ಫ್ರೆಂಚ್ ಸರ್ಕಾರ ಆತನಿಗೆ ತನ್ನ ಪೌರತ್ವ ನೀಡಿ ಗೌರವಿಸಿತ್ತು. ಯುವಕನ ಕಾರ್ಯಕ್ಕೆ ವಿಶ್ವದೆಲ್ಲೆಡೆಯಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು. ಈ ಮಧ್ಯೆ ವೀಡಿಯೋ ನೋಡಿದ ಕೆಲವರು ಹಲವು ಅನುಮಾನವನ್ನು ವ್ಯಕ್ತಪಡಿಸಿದ್ದರು.

4 ವರ್ಷದ ಪುಟ್ಟ ಬಾಲಕ ಬಾಲ್ಕನಿಗೆ ಹೇಗೆ ಬಂದಿದ್ದ? ವಿಡಿಯೋದಲ್ಲಿ ಕಂಡುಬರುವಂತೆ ಬಾಲಕ ಬೀಳದಂತೆ ಕೈ ಹಿಡಿದುಕೊಂಡಿದ್ದವನೊಬ್ಬ ಆತನನ್ನೇಕೆ ರಕ್ಷಿಸಲಿಲ್ಲ? ಕಟ್ಟಡದ ಮೇಲೇರಿದ ಯುವಕ ಯಾರು? ಹಾಗೂ ಬಾಲಕ ಬೀಳುತ್ತಿದ್ದರೂ ಆತನ ಮನೆಯಿಂದ ಯಾರು ಹೊರ ಬರಲಿಲ್ಲವೇಕೆ? ಎಂಬ ಪ್ರಶ್ನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬಂದಿದ್ದವು. ಅದಕ್ಕೆಲ್ಲ ಇಲ್ಲಿದೆ ಉತ್ತರ.

ಘಟನೆ ನಡೆದ ದಿನದಂದು ಬಾಲಕನ ತಾಯಿ ಹೊರಗೆ ಹೋಗಿದ್ದಳು. ಬಳಿಕ ಮನೆಯಲ್ಲಿದ್ದ ತಂದೆ  ಪುಟ್ಟ ಕಂದನನ್ನು ಬಿಟ್ಟು ತಾನೂ ತೆರಳಿದ್ದ. ಆಟವಾಡುತ್ತಾ ಬಾಲ್ಕನಿಗೆ ಬಂದ ಬಾಲಕ, ಗ್ರಿಲ್ ಬಳಿ ಆಯತಪ್ಪಿ ನೇತಾಡತೊಡಗಿದ್ದ.
ಈ ಸಂದರ್ಭದಲ್ಲಿ ಪಕ್ಕದ ಮನೆಯ ವ್ಯಕ್ತಿ ತನ್ನ ಬಾಲ್ಕನಿಯಿಂದ ಕೈಚಾಚಿ ಬಾಲಕನನ್ನು ಹಿಡಿದುಕೊಂಡರೂ ಮೇಲೆ ಎಳೆದುಕೊಳ್ಳಲು ಭಯಪಟ್ಟಿದ್ದ. ತಾನು ಬಾಲಕನನ್ನು ಎಳೆದುಕೊಳ್ಳಲು ಮುಂದಾದ ವೇಳೆ ಆಯತಪ್ಪಿ ಆತ ಕೆಳಗೆ ಬಿದ್ದರೆ ಗತಿಯೇನು ಎಂದು ಆತಂಕಗೊಂಡಿದ್ದ.

ಹೀಗಾಗಿ ಬಾಲಕ ಕೆಳಗೆ ಬೀಳದಂತೆ ಭದ್ರವಾಗಿ ಹಿಡಿದು ಕೊಂಡಿದ್ದ. ಇನ್ನು ಬಾಲಕನನ್ನು ರಕ್ಷಿಸಿದ ಸ್ಪೈಡರ್ ಮ್ಯಾನ್ 22 ವರ್ಷದ ಮಾಮೌದೋ, ಮಾಲಿಯಿಂದ ಬಂದ ನಿರಾಶ್ರಿತ. ಸನಿಹದಲ್ಲಿ ನಡೆಯುತ್ತಿದ್ದ ಫುಟ್ಬಾಲ್ ಪಂದ್ಯವನ್ನು ವೀಕ್ಷಿಸುತ್ತಿದ್ದ ಆತ, ಜನಜಂಗುಳಿ ಸೇರಿರುವುದನ್ನು ಕಂಡು ಸ್ಥಳಕ್ಕೆ ಬಂದಿದ್ದ. ಬಾಲಕ ಬಾಲ್ಕನಿಯಿಂದ ಬೀಳುವಂತೆ ಇರುವುದನ್ನು ನೋಡುತ್ತಿದ್ದಂತೆಯೇ ಕ್ಷಣಮಾತ್ರವೂ ಯೋಚಿಸದೆ ಸರಸರನೆ ಮೇಲೇರಿ ಆತನನ್ನು ರಕ್ಷಿಸಿದ್ದ. ಇನ್ನು ಬಾಲಕನ ತಂದೆ ಮಾರುಕಟ್ಟೆಗೆ ಹೋದವನು ಅಲ್ಲಿ ಗೇಮ್ ಆಡುತ್ತಾ ಕುಳಿತಿದ್ದನಂತೆ. ಇದೀಗ ಪೊಲೀಸರು ನಿರ್ಲಕ್ಷದ ಆರೋಪದ ಮೇಲೆ ಬಂಧಿಸಿ ಆತನನ್ನು ಜೈಲಿಗೆ ಕಳುಹಿಸಲು ಮುಂದಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...