alex Certify
ಕನ್ನಡ ದುನಿಯಾ       Mobile App
       

Kannada Duniya

ಸಮೀಕ್ಷೆಯಲ್ಲಿ ಬಹಿರಂಗವಾಗಿದೆ ಆಘಾತಕಾರಿ ಅಂಶ

ಬಾರ್, ಪಬ್ ಮತ್ತು ಕ್ಲಬ್ ಗಳಲ್ಲಿ ನಡೆಯುವ ಲೈಂಗಿಕ ದೌರ್ಜನ್ಯ ನೈಟ್ ಪಾರ್ಟಿಗಳ ಒಂದು ಭಾಗ ಅಂತಾನೇ ಯುವಜನತೆ ಭಾವಿಸಿದ್ದಾರೆ. ಇತ್ತೀಚೆಗೆ ನಡೆದ ಸಮೀಕ್ಷೆಯೊಂದರಲ್ಲಿ ಈ ಆಘಾತಕಾರಿ ಅಂಶ ಬಯಲಾಗಿದೆ. 18-24 ವರ್ಷ ವಯಸ್ಸಿನ 2013 ಜನರನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ.

ಇವರಲ್ಲಿ ಶೇ.63ರಷ್ಟು ಮಂದಿ ಲೈಂಗಿಕ ಕಿರುಕುಳ ಸರ್ವೇಸಾಮಾನ್ಯ ಎಂಬ ಭಾವನೆ ಹೊಂದಿದ್ದಾರೆ. ಶೇ.26ರಷ್ಟು ಯುವಜನತೆ ಅದರ ಗಂಭೀರತೆಯನ್ನು ಅರಿತಿದ್ದಾರೆ. ಶೇ.79ರಷ್ಟು ಮಹಿಳೆಯರಿಗೆ ಅಸಭ್ಯ ಕಮೆಂಟ್ಸ್, ಅಶ್ಲೀಲ ಸ್ಪರ್ಷ, ಬಲವಂತವಾಗಿ ಬರಸೆಳೆದುಕೊಳ್ಳುವಿಕೆಯ ಅನುಭವವಾಗಿದೆ.

ಮದ್ಯ ಸೇವಿಸಿದ್ದಾರೆ ಎಂದ ಮಾತ್ರಕ್ಕೆ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಬೇಕೆಂದೇನಿಲ್ಲ. ಇಂತಹ ಕೃತ್ಯಗಳ ವಿರುದ್ಧ ಮಹಿಳೆಯರು ಕೂಡ ಸಿಡಿದೇಳಬೇಕು ಎನ್ನುತ್ತಾರೆ ಸಂಶೋಧಕರು. ನೈಟ್ ಕ್ಲಬ್ ಮತ್ತು ಪಬ್, ಬಾರ್ ಗಳಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಇಂತಹ ಕೃತ್ಯಕ್ಕೆ ಕಡಿವಾಣ ಹಾಕಲೇಬೇಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...