alex Certify
ಕನ್ನಡ ದುನಿಯಾ       Mobile App
       

Kannada Duniya

‘ಯುಟ್ಯೂಬ್’ ನಲ್ಲಿ ಅಪ್ ಲೋಡ್ ಆದ ಮೊದಲ ವಿಡಿಯೋ ಯಾವುದು ಗೊತ್ತಾ?

2077resizer

ವಿಡಿಯೋ ಹಂಚಿಕೊಳ್ಳುವ ಸಾಮಾಜಿಕ ಜಾಲ ತಾಣ ಯು ಟ್ಯೂಬ್ ಹದಿಮೂರು ವರ್ಷಗಳ ಹಿಂದೆ ಆರಂಭವಾದ ವೇಳೆ ಈ ಪರಿ ಜನಪ್ರಿಯತೆ ಪಡೆಯುತ್ತದೆಂದು ಊಹಿಸಿರಲಿಕ್ಕಿಲ್ಲ. ಗೂಗಲ್ ನ ಆರ್ಕುಟ್, ಫೇಸ್ ಬುಕ್ ನ ಜನಪ್ರಿಯತೆಯ ಕಾರಣಕ್ಕೆ ಮರೆಯಾದರೆ ಯುಟ್ಯೂಬ್ ಮಾತ್ರ ಶರವೇಗದಲ್ಲಿ ಮುನ್ನುಗ್ಗುತ್ತಿದೆ.

ಹದಿಮೂರು ವರ್ಷಗಳ ಹಿಂದೆ ಯುಟ್ಯೂಬ್ ಗೆ ಮೊದಲ ವಿಡಿಯೋ ಅಪ್ ಲೋಡ್ ಆಗಿದ್ದು, ಯುಟ್ಯೂಬ್ ಜನಕರಲ್ಲಿ ಒಬ್ಬನಾದ ಜಾವೇದ್ ಕರೀಮ್ ಮೃಗಾಲಯದ ಮುಂದೆ ನಿಂತು ಆನೆಗಳನ್ನು ನೋಡುತ್ತಾ ಆದರ ವಿವರಣೆಯನ್ನು ನೀಡುತ್ತಿದ್ದಾರೆ. ಅಂದು ಯುಟ್ಯೂಬಿಗೆ ಅಪ್ ಲೋಡ್ ಆದ ಮೊದಲ ವಿಡಿಯೋ ಇದಾಗಿದೆ.

ಯು ಟ್ಯೂಬ್ ನ್ನು ಗೂಗಲ್ ಖರೀದಿಸಿದ ವೇಳೆ ಜಾವೇದ್ ಕರೀಮ್ ಗೆ 84 ಮಿಲಿಯನ್ ಡಾಲರ್ ಮೌಲ್ಯದ ಶೇರ್ಸ್ ಸಿಕ್ಕಿತ್ತು ಎನ್ನಲಾಗುತ್ತಿದೆ. ಆಪಾರ ಜನಪ್ರಿಯತೆ ಪಡೆದಿರುವ ಯು ಟ್ಯೂಬ್ ನಲ್ಲಿ ಇಂದು ಪ್ರತಿ ನಿಮಿಷಕ್ಕೆ ನೂರಾರು ಗಂಟೆಗಳ ಕಾಲದ ವಿಡಿಯೋ ಅಪ್ ಲೋಡ್ ಆಗುತ್ತಿದೆ ಎಂದರೆ ಅದು ಪಡೆದ ಜನಪ್ರಿಯತೆಯನ್ನು ಊಹಿಸಬಹುದಾಗಿದೆ. ಮೊದಲು ಅಪ್ ಲೋಡ್ ಆದ ವಿಡಿಯೋ ಕೆಳಗಿದೆ ನೋಡಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...