alex Certify
ಕನ್ನಡ ದುನಿಯಾ       Mobile App
       

Kannada Duniya

ಸಾರ್ವಜನಿಕ ಶೌಚಾಲಯದಲ್ಲಿ ಈ ವಸ್ತು ಕಂಡರೆ ಕೂಡಲೇ ದೂರು ಕೊಡಿ….

ಸಾಮಾನ್ಯವಾಗಿ ಮಹಿಳೆಯರ ಶೌಚಾಲಯದಲ್ಲಿ ಒಂದು ಕೋಟ್ ಹುಕ್ ಇಟ್ಟಿರುತ್ತಾರೆ. ಹುಕ್ ಇಲ್ಲ ಅಂತಾದ್ರೆ ಬಾಗಿಲಿನ ಚಿಲಕಕ್ಕೆ ಬ್ಯಾಗ್ ನೇತು ಹಾಕೋದು ಕಾಮನ್. ಆದ್ರೆ ಸಾರ್ವಜನಿಕ ಶೌಚಾಲಯಗಳಲ್ಲಿರುವ ಇಂತಹ ಹುಕ್ ಗಳನ್ನು ನೀವು ಕೂಲಂಕುಷವಾಗಿ ಪರಿಶೀಲಿಸಬೇಕು.

ಅವುಗಳ ಬಗ್ಗೆ ಅತ್ಯಂತ ಎಚ್ಚರಿಕೆಯಿಂದ ಇರಬೇಕು. ಯಾಕಂದ್ರೆ ಈ ಹುಕ್ ಗಳಲ್ಲೇ ರಹಸ್ಯ ಕ್ಯಾಮರಾ ಇಟ್ಟಿರುತ್ತಾರೆ. ಕಳೆದ ವರ್ಷ ಫ್ಲೋರಿಡಾದಲ್ಲಿ ಇಂಥದ್ದೇ ಘಟನೆ ಬೆಳಕಿಗೆ ಬಂದಿತ್ತು. ಬ್ರಿಟನ್ ನಲ್ಲಿ ಈಗಾಗ್ಲೇ ಇಂತಹ ರಹಸ್ಯ ಕ್ಯಾಮರಾ ಉಳ್ಳ ಸ್ಪೈ ಹುಕ್ ಗಳು ಲಭ್ಯವಿವೆ.

ಇದರಲ್ಲಿ ಪುಟ್ಟದೊಂದು ಕ್ಯಾಮರಾ ಇಟ್ಟು ಮಹಿಳೆಯರ ಶೌಚದ ದೃಶ್ಯಗಳನ್ನು ರೆಕಾರ್ಡ್ ಮಾಡಲಾಗುತ್ತದೆ. ಒಳಗಡೆ ಮೆಮೊರಿ ಕಾರ್ಡ್ ಇರುವುದರಿಂದ ನಂತರ ಯುಎಸ್ ಬಿ ಅಳವಡಿಸಿ ಇವನ್ನೆಲ್ಲ ಕಂಪ್ಯೂಟರ್ ಗೆ ಡೌನ್ಲೋಡ್ ಕೂಡ ಮಾಡಬಹುದು.

ಹಾಗಾಗಿ ಶೌಚಾಲಯದಲ್ಲಿ ಇಂತಹ ಅನುಮಾನಾಸ್ಪದ ವಸ್ತುಗಳು ಕಂಡಲ್ಲಿ ಕೂಡಲೇ ಅಲ್ಲಿಂದ ಹೊರಬನ್ನಿ ಮತ್ತು ಪೊಲೀಸರಿಗೆ ದೂರು ನೀಡಿ. ಬ್ರಿಟನ್ ನಲ್ಲಂತೂ ಇಂತಹ ಹುಕ್ ಗಳು ಆನ್ ಲೈನ್ ನಲ್ಲೂ ಲಭ್ಯವಿರೋದ್ರಿಂದ ಮಹಿಳೆಯರಲ್ಲಿ ಆತಂಕ ಶುರುವಾಗಿದೆ.

Detectives investigating hidden cameras in women’s restroomsDetectives in the Upper Keys are investigating three…

Posted by MCSO – Florida Keys on Tuesday, May 31, 2016

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...