alex Certify
ಕನ್ನಡ ದುನಿಯಾ       Mobile App
       

Kannada Duniya

ಇದು ಅಂತಿಂಥಾ ಮದ್ವೆಯಲ್ಲ, ಓದಿದ್ರೆ ಬೆಚ್ಚಿ ಬೀಳ್ತೀರಿ..!

couple marriage china

ಸಾಮಾನ್ಯವಾಗಿ ಮದುವೆಯಲ್ಲಿ ವಧು- ವರರು ಹೂವಿನ ಹಾರ ಅಥವಾ ಉಂಗುರ ಬದಲಾಯಿಸಿಕೊಳ್ಳುತ್ತಾರೆ. ಆದರೆ ಚೀನಾದ ಈ ಜೋಡಿ ಭಾರೀ ತೂಕದ ಹಾವನ್ನೇ ಹಾರವನ್ನಾಗಿಸಿಕೊಂಡಿದ್ದಾರೆ..!

26 ವರ್ಷದ ವು ಜಿಯಾಫೆಂಗ್ ತನ್ನ ಬಾಳ ಸಂಗಾತಿ ಜಿಯಾಂಗ್ ಜೂ ಅವರ ಕೊರಳಿಗೆ 30 ಕೆಜಿ ತೂಕದ ಹಾವನ್ನು ಹಾಕಿದ್ದಾನೆ. ಜಿಯಾಂಗ್ ಕೂಡ 15 ಕೆಜಿ ತೂಕದ ಹಾವನ್ನು ಗಂಡನ ಕೊರಳಿಗೆ ಹಾಕಿದ್ದಾಳೆ.

ವರನಾದ ಜಿಯಾಫೆಂಗ್ ಒಬ್ಬ ವನ್ಯಜೀವಿ ರಕ್ಷಕ. ಈ ಕಾರಣಕ್ಕಾಗಿ ಅವನು ಸಾರ್ವಜನಿಕರಲ್ಲಿ ಹಾವುಗಳ ರಕ್ಷಣೆಯ ಕುರಿತು ಅರಿವು ಮೂಡಿಸಲು ಹೀಗೆ ವಿನೂತನ ಶೈಲಿಯಲ್ಲಿ ಮದುವೆಯಾಗಿದ್ದಾನೆ. ಚೀನಾದ ಜನರು ಹಾವುಗಳನ್ನು ಹೆಚ್ಚಾಗಿ ತಿನ್ನುವುದರಿಂದ ಅಲ್ಲಿ ಹಾವಿನ ಸಂತತಿ ಕ್ಷೀಣಿಸುತ್ತಿದೆಯಂತೆ. ಈ ಕಾರಣಕ್ಕಾಗಿ ಜಿಯಾಫೆಂಗ್ ದಂಪತಿಗಳು ತಮ್ಮ ಮದುವೆಯ ಮೂಲಕ ಜನರಲ್ಲಿ ಹಾವಿನ ರಕ್ಷಣೆಯ ಕುರಿತು ಅರಿವು ಮೂಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...