alex Certify
ಕನ್ನಡ ದುನಿಯಾ       Mobile App
       

Kannada Duniya

ಕೇವಲ 72 ರೂ.ಗೆ ಸಿಗ್ತಾ ಇದೆ ಮನೆ..!

15_04_2017-hpuse-in-italy

ಈ ಸುದ್ದಿ ಕೇಳಿದ್ರೆ ನಿಮಗೆ ಆಶ್ಚರ್ಯವಾಗಬಹುದು. ಆದ್ರೆ ಇದು ಸತ್ಯ. ಕೇವಲ 72 ರೂಪಾಯಿಗೆ ಮನೆ ಸಿಗುತ್ತೆ. ಇಟಲಿಯ ಗಂಗಿ, ಸಿಸಿಲಿ, ಕೆರೆಗಾ ಟೈಗರ್, ಪೀಡ್ಮಾಂಟ್ ನಲ್ಲಿ ಕೇವಲ 72 ರೂಪಾಯಿಗೆ ಮನೆ ಮಾರಾಟವಾಗ್ತಾ ಇದೆ.

ವಿಶೇಷವೆಂದ್ರೆ ಕೇವಲ 72 ರೂಪಾಯಿಗೆ ಮನೆ ಸಿಕ್ಕರೂ ಖರೀದಿ ಮಾಡೋಕೆ ಜನ ಇಲ್ಲ. ಭಯಾನಕ ಹಾಗೂ ದುರಾದೃಷ್ಟದ ಪ್ರದೇಶವೆಂಬ ಪಟ್ಟಿಯಲ್ಲಿ ಈ ಊರುಗಳ ಹೆಸರಿದೆ. ಹಾಗಾಗಿ ಈ ಪ್ರದೇಶದಲ್ಲಿ ಕಡಿಮೆ ಬೆಲೆಗೆ ಮನೆ ಮಾರಾಟವಾದ್ರೂ ಮನೆ ಖರೀದಿಗೆ ಯಾರೂ ಮುಂದೆ ಬರ್ತಾ ಇಲ್ಲ.

ದುರದೃಷ್ಟದ ಪ್ರದೇಶ ಇದಾಗಿರುವುದರಿಂದ ಇಲ್ಲಿ ವಾಸ ಮಾಡುವವರಿಗೆ ಉದ್ಯೋಗ ಸಿಗೋದಿಲ್ಲ. ನೈಸರ್ಗಿಕ ವಿಪತ್ತು ಇಲ್ಲಿ ಸಾಮಾನ್ಯ. ಹಾಗೆ ಅಪಹರಣ ಪ್ರಕರಣಗಳೂ ನಡೆಯುತ್ತಿರುತ್ತವೆ. ಹಾಗಾಗಿ ಜನರು ಇಲ್ಲಿ ವಾಸವಾಗಲು ಮನಸ್ಸು ಮಾಡುವುದಿಲ್ಲ. ಹಾಗಾಗಿ ಕಡಿಮೆ ಬೆಲೆಗೆ ಆಕರ್ಷಕ ಆಫರ್ ನೀಡಿ ಮನೆ ಮಾರಾಟ ಮಾಡಲು ನಿರ್ಧರಿಸಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಇಟಲಿ ಮೇಯರ್ ಘೋಷಣೆ ಕೂಡ ಮಾಡಿದ್ದಾರೆ. ಕೇವಲ 72 ರೂಪಾಯಿ ( 1 ಯುರೋ)ಗೆ ಮನೆ ಮಾರಲಾಗುವುದೆಂದು ತಿಳಿಸಿದ್ದಾರೆ. ಆದ್ರೆ ಮನೆ ತುಂಬಾ ಹಳೆಯದಾಗಿದ್ದು, ಅದ್ರ ರಿಪೇರಿಗೆ 18 ಲಕ್ಷ ಖರ್ಚಾಗಲಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...