alex Certify
ಕನ್ನಡ ದುನಿಯಾ       Mobile App
       

Kannada Duniya

ಅಮೆರಿಕ ಯುವಕನ ಸೂಟ್ ಕೇಸ್ ನಲ್ಲಿತ್ತು ಮಹಿಳೆ ರುಂಡ

ಜಪಾನ್ ನಲ್ಲಿ ಅಮೆರಿಕ ಮೂಲದ ಪ್ರವಾಸಿಗನನ್ನು ಪೊಲೀಸರು ಬಂಧಿಸಿದ್ದಾರೆ. ಆತ ಬಾಡಿಗೆಗೆ ಇದ್ದ ಫ್ಲಾಟ್ ನಲ್ಲಿ ಸೂಟ್ ಕೇಸ್ ಒಂದು ಪತ್ತೆಯಾಗಿದ್ದು, ಅದರಲ್ಲಿ ಮಹಿಳೆಯ ರುಂಡ ಸಿಕ್ಕಿದೆ.

ನ್ಯೂಯಾರ್ಕ್ ನಿವಾಸಿ 26 ವರ್ಷದ ಯೆವ್ಗೆನಿ ವಾಲಿಸಿವಿಚ್ ಬೇರಾಕ್ತರ್ ಬಂಧಿತ ಆರೋಪಿ. ಹೈಗೋ ಮೂಲದ 27 ವರ್ಷದ ಯುವತಿಯನ್ನು ರುಂಡ ಕತ್ತರಿಸಿ ಹತ್ಯೆ ಮಾಡಲಾಗಿದೆ. ಫೆಬ್ರವರಿ 16ರಂದು ಈಕೆ ಕಾಣೆಯಾಗಿದ್ದಳು.

ನಾಪತ್ತೆಯಾಗುವ ಸ್ವಲ್ಪ ಹೊತ್ತಿಗೆ ಮುನ್ನ ಯೆವ್ಗೆನಿ ಜೊತೆಯಲ್ಲಿ ತೆರಳ್ತಾ ಇರೋ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಮಧ್ಯರಾತ್ರಿ ವೇಳೆ ರೈಲ್ವೆ ಸ್ಟೇಶನ್ ನಲ್ಲಿ ಭೇಟಿಯಾದ ಇಬ್ಬರೂ ಜೊತೆಯಾಗಿ ಅಪಾರ್ಟ್ಮೆಂಟ್ ಗೆ ಬಂದಿದ್ದರು.

ಸಾಮಾಜಿಕ ತಾಣದ ಮೂಲಕ ಪರಿಚಯವಾಗಿರೋ ಯುವಕನನ್ನು ಭೇಟಿಯಾಗಲು ತೆರಳುತ್ತಿರುವುದಾಗಿ ಯುವತಿ ತನ್ನ ಸ್ನೇಹಿತೆ ಬಳಿ ಹೇಳಿದ್ದಳು. ಫೆಬ್ರವರಿ 17ರಂದು ಆಕೆ ನಾಪತ್ತೆಯಾಗಿರೋದಾಗಿ ಪೊಲೀಸರಿಗೆ ದೂರು ಬಂದಿತ್ತು.

ಅದಾಗಿ 6 ದಿನಗಳ ಬಳಿಕ ಯುವಕನ ಸೂಟ್ ಕೇಸ್ ನಲ್ಲಿ ಯುವತಿಯ ರುಂಡ ಸಿಕ್ಕಿದೆ. ಆಕೆಯ ದೇಹದ ಉಳಿದ ಭಾಗಗಳು ಅಲ್ಲೇ ಸಮೀಪದ ಪರ್ವತ ಪ್ರದೇಶದಲ್ಲಿ ಪತ್ತೆಯಾಗಿವೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...