alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತೆ ಸುದ್ದಿಯಲ್ಲಿದ್ದಾನೆ ಹಾಟ್ ಯೋಗಗುರು ಬಿಕ್ರಮ್

ಜಗತ್ತಿನ ಹಾಟ್ ಯೋಗಗುರು ಬಿಕ್ರಮ್ ಚೌಧರಿ ಮತ್ತೆ ಸುದ್ದಿಯಲ್ಲಿದ್ದಾನೆ. ಬಿಕ್ರಮ್ ಚೌಧರಿ ತನ್ನನ್ನು ದಿವಾಳಿಯೆಂದು ಘೋಷಣೆ ಮಾಡುವಂತೆ ಅಮೆರಿಕಾ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾನೆ. ಪೀಡಿತರಿಗೆ ನೀಡಲು ಹಣವಿಲ್ಲ. ಹಾಗಾಗಿ ತನ್ನನ್ನು ದಿವಾಳಿಯೆಂದು ಘೋಷಣೆ ಮಾಡುವಂತೆ ಮನವಿ ಸಲ್ಲಿಸಿದ್ದಾನೆ.

ಲೈಂಗಿಕ ಕಿರುಕುಳ ಪ್ರಕರಣವೊಂದರಲ್ಲಿ ಬಿಕ್ರಮ್ ಚೌಧರಿ ಆಸ್ತಿಯನ್ನು ಮುಟ್ಟುಗೋಲು ಮಾಡಲಾಗಿದೆ. ಬಿಕ್ರಮ್ 500 ಕೋಟಿ ಆಸ್ತಿ ಒಡೆಯನಾಗಿದ್ದ. ಬಿಕ್ರಮ್ ಸುಮಾರು 700 ಯೋಗ ಸ್ಟುಡಿಯೋಗಳ ಮಾಲೀಕನಾಗಿದ್ದಾನೆ. 70 ವರ್ಷದ ಬಿಕ್ರಮ್ ಚೌಧರಿ ಬಿಕ್ರಮ್ ಯೋಗ ಹೆಸರಿನಲ್ಲಿ ಯೋಗದ ತರಬೇತಿ ನೀಡುತ್ತಿದ್ದ. ಈತನನ್ನು ವಿಶ್ವದ ಹಾಟ್ ಯೋಗ ಗುರು ಎಂದು ಕರೆಯಲಾಗುತ್ತದೆ.

220 ದೇಶಗಳಲ್ಲಿ 720ಕ್ಕೂ ಹೆಚ್ಚು ಯೋಗ ಶಾಲೆ ಈತನ ಹೆಸರಿನಲ್ಲಿದೆ. ಬ್ರಿಟನ್ ಒಂದರಲ್ಲಿಯೇ 12 ಕ್ಕೂ ಹೆಚ್ಚು ಶಾಲೆಗಳಿವೆ. ಗಣ್ಯ ವ್ಯಕ್ತಿಗಳು, ಗಣ್ಯ ವ್ಯಕ್ತಿಗಳ ಮಕ್ಕಳು, ಹಾಲಿವುಡ್ ಸ್ಟಾರ್ಸ್ ಈ ಯೋಗ ಗುರುವಿನಿಂದ ತರಬೇತಿ ಪಡೆದಿದ್ದಾರೆ. ಬಿಕ್ರಮ್ ವಕೀಲೆ ಮೀನಾಕ್ಷಿ ಸೇರಿದಂತೆ ಆರು ಮಹಿಳೆಯರು 2013ರಲ್ಲಿ ಬಿಕ್ರಮ್ ವಿರುದ್ಧ ಲೈಂಗಿಕ ಕಿರುಕುಳ ದೂರು ನೀಡಿದ್ದರು.

2015ರಲ್ಲಿ ಮೀನಾಕ್ಷಿ ಯುಎಸ್ ಕೋರ್ಟ್ ನಲ್ಲಿ ದೂರು ಸಲ್ಲಿಸಿದ್ದರು. ವಿಚಾರಣೆ ಪೂರ್ಣಗೊಳಿಸಿದ್ದ ಕೋರ್ಟ್ 2016ರಲ್ಲಿ ಬಿಕ್ರಮ್ ಆಸ್ತಿಯನ್ನು ಮೀನಾಕ್ಷಿ ಹೆಸರಿಗೆ ಹಸ್ತಾಂತರಿಸುವಂತೆ ಸೂಚಿಸಿತ್ತು. ಇದ್ರಿಂದ ಬೇಸತ್ತ ಬಿಕ್ರಮ್ ಪತ್ನಿ 2015ರಲ್ಲಿಯೇ ವಿಚ್ಛೇದನ ನೀಡಿದ್ದಳು. ಮೂಲಗಳ ಪ್ರಕಾರ ಬಿಕ್ರಮ್ ಯೋಗ ತರಬೇತಿಗಾಗಿ 10 ಸಾವಿರ ಡಾಲರ್ ಪಡೆಯುತ್ತಿದ್ದನಂತೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...