alex Certify
ಕನ್ನಡ ದುನಿಯಾ       Mobile App
       

Kannada Duniya

ವಿಡಿಯೋ ಗೇಮ್ ಗಾಗಿ ವಿಶ್ವದ ಸೆಕ್ಸಿ ನಿರೂಪಕಿ ಜೊತೆ ಬ್ರೇಕ್ ಅಪ್

ನನಗೂ ಒಬ್ಬ ಗೆಳತಿ ಬೇಕು. ಆಕೆ ಎಲ್ಲರಿಗಿಂತ ಸುಂದರವಾಗಿರಬೇಕೆಂದು ಸಾಮಾನ್ಯವಾಗಿ ಎಲ್ಲ ಹುಡುಗ್ರೂ ಬಯಸ್ತಾರೆ. ಈ ವ್ಯಕ್ತಿ ಕೂಡ ಹಾಗೆ ಕನಸು ಕಂಡಿದ್ದ. ಆತನ ಕನಸು ನನಸಾಗಿತ್ತು. ಆದ್ರೆ ವಿಡಿಯೋ ಗೇಮ್ ಗಾಗಿ ಸುಂದರ ಹುಡುಗಿ ಜೊತೆ ಬ್ರೇಕ್ ಅಪ್ ಮಾಡಿಕೊಂಡಿದ್ದಾನೆ ಭೂಪ.

ಡಗಲಸ್ ಫೇಜ್ ಸೆನ್ಶರ್ ಮಾರ್ಟಿನ್ ಒಬ್ಬ ಯುಟ್ಯೂಬ್ ಸ್ಟಾರ್. ಈತನ ಗರ್ಲ್ ಫ್ರೆಂಡ್ ಯಾನೆಟ್ ಗಾರ್ಸಿಯಾ. ಹವಾಮಾನದ ವರದಿ ನೀಡುವ ನಿರೂಪಕಿ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿದ್ದಾಳೆ. ವಿಶ್ವದ ಸೆಕ್ಸಿ ನಿರೂಪಕಿ ಎಂಬ ಪಟ್ಟ ಈಕೆಗೆ ಸಿಕ್ಕಿದೆ. ಮೂರು ವರ್ಷಗಳಿಂದ ಮಾರ್ಟಿನ್ ಹಾಗೂ ಯಾನೆಟ್ ಡೇಟಿಂಗ್ ಮಾಡ್ತಿದ್ದರು.

ವರದಿ ಪ್ರಕಾರ ಕೆಲ ದಿನಗಳ ಹಿಂದಷ್ಟೇ ಮಾರ್ಟಿನ್ ಹಾಗೂ ಗಾರ್ಸಿಯಾ ಬ್ರೇಕ್ ಅಪ್ ಮಾಡಿಕೊಂಡಿದ್ದಾರೆ. ವಿಡಿಯೋಗೇಮ್ ಗಾಗಿ ಏನು ಮಾಡಲೂ ಸಿದ್ಧ ಎಂದಿರುವ ಮಾರ್ಟಿನ್ ಪ್ರೇಯಸಿಯಿಂದ ದೂರವಾಗಿದ್ದಾನೆ. ಕಾಲ್ ಆಫ್ ಡ್ಯೂಟಿ ಹೆಸರಿನ ವಿಡಿಯೋಗೇಮ್ ಮೇಲೆ ಹೆಚ್ಚಿನ ಗಮನ ನೀಡಲು ಮುಂದಾಗಿರುವ ಮಾರ್ಟಿನ್, ಗಾರ್ಸಿಯಾಳಿಂದ ದೂರವಾಗಿದ್ದಾನೆ. ಈ ವಿಷ್ಯವನ್ನು ಮಾರ್ಟಿನ್ ಯುಟ್ಯೂಬ್ ಮೂಲಕ ಹೇಳಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...