alex Certify
ಕನ್ನಡ ದುನಿಯಾ       Mobile App
       

Kannada Duniya

ಉಗ್ರರಿಗೊಂದು ಪತ್ರ ಬರೆಯಬೇಕಂತೆ ಬ್ರಿಟನ್ ಶಾಲಾ ಮಕ್ಕಳು

geico-more-importance-of-reading-600px-post-2015

ಬ್ರಿಟನ್ ನಲ್ಲಿ ಹೊಸ ಶೈಕ್ಷಣಿಕ ವರ್ಷಕ್ಕಾಗಿ ಮುದ್ರಿಸಿರುವ ಶಾಲಾ ಪುಸ್ತಕಗಳಲ್ಲಿ ಉಗ್ರನಿಗೆ ಪತ್ರ ಬರೆಯುವಂತೆ ಮಕ್ಕಳಿಗೆ ಸೂಚಿಸಲಾಗಿದೆ. ಮ್ಯಾಂಚೆಸ್ಟರ್ ನಲ್ಲಿ ನಡೆದ ಭಯೋತ್ಪಾದಕ ದಾಳಿಗೂ ಒಂದು ವಾರ ಮೊದಲು ಈ ಪುಸ್ತಕಗಳನ್ನು ಪಬ್ಲಿಷ್ ಮಾಡಲಾಗಿದೆ.

7 ರಿಂದ 11 ವರ್ಷದ ಮಕ್ಕಳ ಪಠ್ಯದಲ್ಲಿ ಈ ವಿಷಯವನ್ನು ಅಳವಡಿಸಲಾಗಿದೆ. ತಮಗೆ ನ್ಯಾಯ ಮತ್ತು ಗೌರವ ಸಿಗುತ್ತಿಲ್ಲ ಅನ್ನೋ ಕಾರಣಕ್ಕೆ ಉಗ್ರರು ದುಷ್ಕೃತ್ಯ ಎಸಗುತ್ತಾರೆ ಅನ್ನೋ ಅರ್ಥದ ಸಂದೇಶ ಕೂಡ ಪುಸ್ತಕದಲ್ಲಿದೆ.

ಭಯೋತ್ಪಾದಕರಿಗೆ 6 ಪ್ರಶ್ನೆಗಳನ್ನು ಕೇಳುವಂತೆಯೂ ಪಠ್ಯದಲ್ಲಿ ಮಕ್ಕಳಿಗೆ ಸೂಚಿಸಲಾಗಿದೆ. ಬ್ರಿಲಿಯಂಟ್ ಪಬ್ಲಿಕೇಷನ್ಸ್ ಈ ಪುಸ್ತಕವನ್ನು ಪ್ರಕಟಿಸಿದೆ. ಪಠ್ಯದಲ್ಲಿ ಉಗ್ರರಿಗೆ ಪತ್ರ ಬರೆಯುವಂತೆ ಸೂಚಿಸಿರೋದು ಸರಿಯಲ್ಲ ಅಂತಾ ವಿಮರ್ಷಕರು ಅಭಿಪ್ರಾಯಪಟ್ಟಿದ್ದಾರೆ.

ಭಯೋತ್ಪಾದನೆಯನ್ನು ಮಾನವೀಯತೆಯ ದೃಷ್ಟಿಯಿಂದ ನೋಡಲು ಪ್ರಾಥಮಿಕ ಶಾಲೆಯ ತರಗತಿ ಸೂಕ್ತ ಜಾಗವಲ್ಲ ಅನ್ನೋದು ತಜ್ಞರ ಅಭಿಪ್ರಾಯ. ಇದರಿಂದ ಉಗ್ರರ ಬಗ್ಗೆ ಮಕ್ಕಳಿಗೆ ಕರುಣೆ ಮೂಡುವ ಸಾಧ್ಯತೆಗಳೂ ಇರುತ್ತವೆ ಅನ್ನೋದು ಅವರ ಆತಂಕ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...