alex Certify
ಕನ್ನಡ ದುನಿಯಾ       Mobile App
       

Kannada Duniya

ಜಗತ್ತಿನ ದುಬಾರಿ ತಿನಿಸುಗಳ ಬೆಲೆ ಕೇಳಿದ್ರೆ ದಂಗಾಗ್ತೀರಾ…!

ಹೋಟೆಲ್ ತಿನಿಸುಗಳು ಈಗ ಬಲು ದುಬಾರಿ. ತಿಂಗಳ ಕೊನೆಯಲ್ಲಂತೂ ಕೈಯಲ್ಲಿ ಕಾಸು ಇರೋದಿಲ್ಲ. ಆಗ ಮೀಡಿಯಂ ಸೈಜ್ ಪಿಜ್ಜಾ, ಕೋಕ್ ಸಿಕ್ಕಿದ್ರೂ ಜನರು ಖುಷಿಪಡ್ತಾರೆ. ಆದ್ರೆ ಕೆಲವೊಂದು ದುಬಾರಿ ತಿನಿಸುಗಳ ಬೆಲೆ ಕೇಳಿದ್ರೇನೇ ನಮ್ಮ ಹಸಿವು ಆರಿಹೋಗುತ್ತದೆ. ಅವು ಯಾವುದು ಅನ್ನೋದನ್ನು ನೋಡೋಣ.

ದಿ ಗೋಲ್ಡನ್ ಫಿಯೋನಿಕ್ಸ್ ಕಪ್ ಕೇಕ್ : ಇದರ ಬೆಲೆ 1000 ಡಾಲರ್. ಅಂದ್ರೆ ಸರಿಸುಮಾರು 63,767 ರೂಪಾಯಿ. ನ್ಯೂಯಾರ್ಕ್ ನ ಸೆರೆಂಡಿಪಿಟಿ ಎಂಬಲ್ಲಿ ಸಿಗುತ್ತದೆ. ಗೋಲ್ಡ್ ಡಸ್ಟ್ ಹಾಗೂ ಗೋಲ್ಡ್ ಶೀಟ್ ಗಳಿಂದ ಮಾಡಿರುವ ಕೇಕ್ ಇದು.

ಸಮುಂದರಿ ಖಜಾನಾ ಕರಿ : ಇದರ ಬೆಲೆ 3200 ಡಾಲರ್, ಅಂದ್ರೆ 2,04,056 ರೂಪಾಯಿ. ಈ ತಿನಿಸು ಲಂಡನ್ ನ ಬಾಂಬೆ ಬ್ರಾಸಿಯರ್ ನಲ್ಲಿ ದೊರೆಯುತ್ತದೆ. ಇದು ಸೀ ಫುಡ್. ಡೆವೊನ್ ಕ್ರಾಬ್, ವೈಟ್ ಟ್ರಫಲ್, ಬೆಲುಗಾ ಕೇವಿಯರ್, ಗೋಲ್ಡ್ ಲೀಫ್, ಚಿನ್ನ ಲೇಪಿತ ಸ್ಕಾಟಿಶ್ ಲಾಬ್ ಸ್ಟರ್ ನಿಂದ ಮಾಡಿರುತ್ತಾರೆ.

ಬಿಲಿಯನ್ ಡಾಲರ್ ಪಾಪ್ ಕಾರ್ನ್ : ಇದರ ಬೆಲೆ 250 ಡಾಲರ್ ಅಂದ್ರೆ 15,941 ರೂಪಾಯಿ. ಚಿಕಾಗೋದ ಬೆರ್ಕೊಸ್ ಪಾಪ್ ಕಾರ್ನ್ ನಲ್ಲಿ ಇದು ದೊರೆಯುತ್ತದೆ. ನೀಲ್ಸನ್ ಮಸ್ಸಿ ಬೌರ್ಬೊನ್ ವೆನಿಲ್ಲಾ ಮತ್ತು ವೆರ್ಮೊಂಟ್ ಕ್ರೀಮರಿ ಬಟರ್ ನಿಂದ ಮಾಡಿರುವ ಪಾಪ್ ಕಾರ್ನ್ ಇದು. 23 ಕ್ಯಾರೆಟ್ ನ ಗೋಲ್ಡ್ ಫ್ಲೇಕ್ಸ್ ಇದರಲ್ಲಿದೆ ಜೊತೆಗೆ ಡೆನ್ಮಾರ್ಕ್ ನ ವಿಶೇಷ ಉಪ್ಪು.

ಬುದ್ಧಾ ಜಂಪ್ಸ್ ಓವರ್ ದಿ ವಾಲ್ ಸೂಪ್ : 190 ಡಾಲರ್ ಮೊತ್ತದ ಈ ತಿನಿಸು ಲಂಡನ್ ನ ಕೈ ಮೇಫೇರ್ ನಲ್ಲಿ ಸಿಗುತ್ತದೆ. ಇದು ಜಗತ್ತಿನಲ್ಲಿರುವ ಅತ್ಯಂತ ದುಬಾರಿ ಸೂಪ್. 5 ದಿನ ಮೊದಲೇ ಇದನ್ನು ಆರ್ಡರ್ ಮಾಡಬೇಕು. ಇದನ್ನು ಶಾರ್ಕ್ ನ ಫಿನ್, ಅಬಲೋನ್, ಜಪಾನ್ ನ ಫ್ಲವರ್ ಮಶ್ರೂಮ್, ಸೀ ಕುಕುಂಬರ್ , ಡ್ರೈಡ್ ಸ್ಕೆಲ್ಲಾಪ್ಸ್, ಚಿಕನ್, ಹುವಾನ್ ಹ್ಯಾಮ್, ಪೋರ್ಕ್ ಮತ್ತು ಜಿನ್ಸೆಂಗ್ ನಿಂದ ಮಾಡಲಾಗುತ್ತದೆ.

ಗೋಲ್ಡ್ ರ್ಯಾಪ್ಡ್ ಸುಶಿ : ಇದರ ಬೆಲೆ 1198 ಡಾಲರ್ ಅದ್ರೆ 1,26,132 ರೂಪಾಯಿ. ಫಿಲಿಪಿನೋ ಶೆಪ್ ಅಂಜೆಲಿಟೊ ಅರನೆಟಾದಲ್ಲಿ ದೊರೆಯುತ್ತದೆ. ಚಿನ್ನದ ಎಲೆಯಲ್ಲಿ ಸುಶಿಯನ್ನು ಸುತ್ತಿ, ಕೇವಿಯರ್, 3 ಎಡಿಬಲ್ ಮಿಕಿಮೊಟೊ ಪರ್ಲ್ಸ್ ಅನ್ನು ಹಾಕಲಾಗಿರುತ್ತದೆ. ವಜ್ರದ ಜೊತೆಗೆ ಸರ್ವ್ ಮಾಡಲಾಗುತ್ತದೆ.

ವೆಸ್ಟಿನ್ ಹೋಟೆಲ್ ಬಾಗಿನ್ : ಇದರ ಬೆಲೆ 1000 ಡಾಲರ್, ದೊರೆಯುವ ಸ್ಥಳ ನ್ಯೂಯಾರ್ಕ್ ನ ವೆಸ್ಟಿನ್ ಹೋಟೆಲ್. ವಿಶ್ವದ ದುಬಾರಿ ಬಾಗೆಲ್ ಇದು. ಚಿನ್ನದ ಎಲೆಗಳಿಂದ ಅಲಂಕರಿಸಲ್ಪಟ್ಟಿರುತ್ತದೆ.

ಮಾರ್ಗೋಸ್ ಪಿಜ್ಜಾ : 2400 ಡಾಲರ್ ಅಂದ್ರೆ 1,53,042 ರೂಪಾಯಿ ಬೆಲೆಬಾಳುವ ಈ ತಿನಿಸು ಮಾಲ್ಟಾದ ಮಾರ್ಗೋಸ್ ಪಿಜ್ಜಾರಿಯಾದಲ್ಲಿ ದೊರೆಯುತ್ತದೆ. ವಿಶ್ವದ ಅತ್ಯಂತ ದುಬಾರಿ ಪಿಜ್ಜಾ ಎಂಬ ಗಿನ್ನಿಸ್ ವಿಶ್ವದಾಖಲೆಯನ್ನೂ ಇದು ಹೊಂದಿದೆ. 100 ಗ್ರಾಂ ವೈಟ್ ಟಫಲ್ಸ್, ಚಿನ್ನದ ಎಲೆ ಇದರಲ್ಲಿರುವ ವಿಶೇಷತೆ.

ಬ್ಲಾಕ್ ವಾಟರ್ ಮೆಲನ್ : ಬೆಲೆ 6100 ಡಾಲರ್ ಅಂದ್ರೆ 3,88,981 ರೂಪಾಯಿ. ಜಪಾನ್ ನ ಹೊಕ್ಕೈಡೋ ಎಂಬಲ್ಲಿ ದೊರೆಯುತ್ತದೆ. ಪ್ರತಿ ವರ್ಷ ಕೇವಲ 100 ಕಪ್ಪು ಕಲ್ಲಂಗಡಿಗಳನ್ನು ಬೆಳೆಯಲಾಗುತ್ತದೆ. ಒಂದು ಹಣ್ಣು 17 ಪೌಂಡ್ ತೂಕವಿರುತ್ತದೆ.

ಜಿಲ್ಲೊನ್ ಡಾಲರ್ ಲೊಬ್ ಸ್ಟರ್ ಫ್ರಿಟ್ಟಾಟಾ : ಈ ತಿನಿಸಿನ ಬೆಲೆ 1000 ಡಾಲರ್. ಮ್ಯಾನ್ ಹಟ್ಟನ್ ನಲ್ಲಿ ಸಿಗುತ್ತದೆ. ಇದೊಂದು ಆಮ್ಲೆಟ್, 650 ಡಾಲರ್ ಮೌಲ್ಯದ ಕೇವಿಯರ್ ಹೊಂದಿರುತ್ತದೆ.

ದಿ ಕ್ಯಾಲಿಫೋರ್ನಿಯಾ ಕ್ಯಾಪಿಟಲ್ ಸಿಟಿ ಡ್ವಾಗ್ : 145 ಡಾಲರ್ ಬೆಲೆಬಾಳುವ ಈ ತಿನಿಸನ್ನು ಸ್ಯಾಕ್ರಾಮೆಂಟೋದ ಕ್ಯಾಪಿಟಲ್ ಡ್ವಾಗ್ ನಲ್ಲಿ ತಯಾರಿಸಲಾಗುತ್ತದೆ. ದನ ಮತ್ತು ನಾಯಿಯ ಮಾಂಸವನ್ನು ವಿವಿಧ ದುಬಾರಿ ತಿನಿಸುಗಳೊಂದಿಗೆ ಸರ್ವ್ ಮಾಡಲಾಗುತ್ತದೆ.

ಅಲ್ಮಾಸ್ ಕೇವಿಯರ್ : ಇದರ ಬೆಲೆ 3400 ಡಾಲರ್ ಅಂದ್ರೆ 2,16,809 ರೂಪಾಯಿ. ಕ್ಯಾಸ್ಪಿಯನ್ ಸೀನಲ್ಲಿರೋ ಬೆಲುಗಾ ಸ್ಟರ್ಜಿಯನ್ ನಲ್ಲಿ ದೊರೆಯುತ್ತದೆ. ಮೀನಿನ ಮೊಟ್ಟೆಯಿಂದ ಮಾಡಿರೋ ತಿನಿಸು ಇದು. ಅವು ಪುಟ್ಟ ಚಿನ್ನದ ಚೆಂಡಿನಂತೆ ಕಾಣುತ್ತವೆ. 24 ಕ್ಯಾರೆಟ್ ಚಿನ್ನದ ಟಿನ್ ಗಳಲ್ಲಿ ಇವುಗಳನ್ನು ಪ್ಯಾಕ್ ಮಾಡಲಾಗುತ್ತದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...