alex Certify
ಕನ್ನಡ ದುನಿಯಾ       Mobile App
       

Kannada Duniya

ಚಾಲಾಕಿ ಕಳ್ಳ ಕದ್ದಿದ್ದನ್ನೆಲ್ಲ ಎಲ್ಲಿಟ್ಕೊಂಡಿದ್ದ ಗೊತ್ತಾ..?

thiefನಿಜಕ್ಕೂ ಇವನೊಬ್ಬ ಬುದ್ಧಿವಂತ ಕಳ್ಳ. ಯಾರಿಗೂ ಕಿಂಚಿತ್ತೂ ಅನುಮಾನ ಬರದ ಹಾಗೆ ವಸ್ತುಗಳನ್ನು ಎಗರಿಸಿ, ಅದನ್ನು ಸೀಕ್ರೆಟ್ ಪ್ಲೇಸ್ ನಲ್ಲಿಟ್ಕೊಂಡು ಎಸ್ಕೇಪ್ ಆದ ಚಾಲಾಕಿ. ಈ ಕಳ್ಳತನ ನಡೆದಿದ್ದು ಅಕ್ಟೋಬರ್ 16ರಂದು. ನಾರ್ತಂಪ್ಟನ್ ನ ಸೇಂಟ್ ಜೇಮ್ಸ್ ಮಿಲ್ ರೋಡ್ ನಲ್ಲಿರುವ ಡ್ಯೂನೆಮ್ ಮಿಲ್ ಮಳಿಗೆಯಲ್ಲಿ.

ಮಧ್ಯಾಹ್ನ ಸುಮಾರು 2 ಗಂಟೆಗೆ ಯುವಕನೊಬ್ಬ ಅಂಗಡಿಗೆ ಎಂಟ್ರಿ ಕೊಟ್ಟಿದ್ದ. ಸುಮಾರು 25 ನಿಮಿಷ ಅಂಗಡಿ ಪೂರ್ತಿ ಸುತ್ತಾಡಿ, ನಿಧಾನವಾಗಿ ಹೊರಬಿದ್ದಿದ್ದ. ಯಾವ ವಸ್ತುವನ್ನೂ ಕೊಳ್ಳದೇ ಅವನು ಸೈಲೆಂಟ್ ಆಗಿ ಹೋಗಿದ್ದನ್ನು ನೋಡಿ ಅಂಗಡಿಯವರಿಗೆ ಅನುಮಾನ ಬಂತು.

ಸ್ವಲ್ಪ ದೂರ ಫಾಲೋ ಮಾಡಿಕೊಂಡು ಹೋದಾಗ ಖತರ್ನಾಕ್ ಕಳ್ಳನ ಅಸಲಿಯತ್ತು ಬಯಲಾಯ್ತು. ಆತ ಅಂಗಡಿಯಲ್ಲಿ ತನಗೆ ಬೇಕಾಗಿದ್ದನ್ನೆಲ್ಲ ತೆಗೆದುಕೊಂಡು ಪ್ಯಾಂಟಿನೊಳಗೆ ಇಟ್ಟುಕೊಂಡಿದ್ದ. ಇನ್ನು ಕೆಲವನ್ನು ತಲೆಗೆ ಹಾಕಿದ್ದ ಟೋಪಿಯೊಳಗೆ ಅಡಗಿಸಿಟ್ಟಿದ್ದ. ಕೊನೆಗೆ ಅಂಗಡಿಯವರು ಬೆನ್ನು ಬಿದ್ದಿರೋದು ಗೊತ್ತಾಗಿ ಕದ್ದಿದ್ದನ್ನೆಲ್ಲ ಕೆರೆ ಏರಿ ಮೇಲೆ ಬಿಸಾಡಿ ಎಸ್ಕೇಪ್ ಆಗಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...