alex Certify
ಕನ್ನಡ ದುನಿಯಾ       Mobile App
       

Kannada Duniya

ಹುಳ ಹುಪ್ಪಟ್ಟೆಗಳನ್ನು ಚಪ್ಪರಿಸಿಕೊಂಡು ತಿನ್ನುತ್ತಾನೆ ಈತ

insect-eater

ಆಧುನಿಕ ಜೀವನಶೈಲಿ, ಆಹಾರ ಪದ್ಧತಿ, ಕುಳಿತು ಮಾಡುವ ಕೆಲಸ ಮೊದಲಾದ ಕಾರಣಗಳಿಂದ ಚಿಕ್ಕ ವಯಸ್ಸಿನಲ್ಲೇ ಅನೇಕ ಕಾಯಿಲೆ ಆವರಿಸಿಬಿಡುತ್ತವೆ. ಅದರಲ್ಲಿಯೂ ಇತ್ತೀಚೆಗೆ ಹೃದಯಾಘಾತ ಪ್ರಕರಣ ಹೆಚ್ಚಾಗಿವೆ. ಇದರಿಂದ ದೂರ ಇರಲು ಇಲ್ಲೊಬ್ಬ ಪುಣ್ಯಾತ್ಮ ಏನು ಮಾಡಿದ್ದಾನೆ ನೋಡಿ,

ಏನಾದರೂ ತಿನ್ನುವಾಗ ಸಣ್ಣ ಇರುವೆ ಕಂಡುಬಂದರೂ ಅದನ್ನು ತಿನ್ನಲು ಹಿಂದೆ ಮುಂದೆ ನೋಡುವುದು ಸಾಮಾನ್ಯ. ಆದರೆ, ಇಲ್ಲೊಬ್ಬ ಹುಳ, ಹುಪ್ಪಟೆಗಳನ್ನು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾನೆ. ಏಕೆ ಹೀಗೆ ತಿನ್ನುತ್ತಿಯಾ ಎಂದು ಯಾರಾದರೂ ಪ್ರಶ್ನಿಸಿದರೆ, ಇದರಿಂದ ಹೃದಯಾಘಾತ ದೂರವಾಗುತ್ತದೆ ಎಂದು ಪ್ರತ್ಯುತ್ತರ ನೀಡುತ್ತಾನೆ. ಇಂಗ್ಲೆಂಡ್ ಬ್ಲಾಕ್ ಬರ್ನ್ ನಿವಾಸಿಯಾಗಿರುವ ಪೀಟರ್ ಬೈಕರ್ಟನ್ ಊಟ, ತಿಂಡಿ ತಿನ್ನುವ ಸಂದರ್ಭದಲ್ಲಿ ಜೊತೆಗೆ ಹುಳ, ಮಿಡತೆಗಳನ್ನು ಕೂಡ ಸೇರಿಸಿಕೊಂಡು ತಿನ್ನುತ್ತಾನೆ.

ಆರೋಗ್ಯದ ಬಗ್ಗೆ ಅಂತರ್ಜಾಲದಲ್ಲಿ ಮಾಹಿತಿ ಹುಡುಕುವ ಸಂದರ್ಭದಲ್ಲಿ ಹುಳ ತಿನ್ನುವುದರಿಂದ ಬೊಜ್ಜು ಕರಗುತ್ತದೆ. ಹೃದಯಾಘಾತವಾಗುವುದಿಲ್ಲ ಎಂದು ಹೇಳಿದ್ದನ್ನು ನೋಡಿದ್ದ ಪೀಟರ್, ಅಂದಿನಿಂದಲೂ ಹುಳ ಕಂಡರೆ ಬಿಡುವುದಿಲ್ಲ. ಅಲ್ಲದೇ ಆತ ಮೊದಲಿಗಿಂತ ಹೆಚ್ಚು ಆರೋಗ್ಯವಾಗಿದ್ದಾನೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...