alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿದ್ದಾನೆ ನೋಡಿ ವಿಶ್ವದ ಅತಿ ಕೆಟ್ಟ ಡ್ರೈವರ್…!

ಚೀನಾದ ಹೈವೇನಲ್ಲಿ ನಡೆದ ಈ ಘಟನೆ ನಿಜಕ್ಕೂ ಬೆಚ್ಚಿಬೀಳಿಸುವಂತಿದೆ. ಕಾರು ಚಾಲಕನ ಯಡವಟ್ಟು ನೋಡಿ ಜನ ಹಿಡಿಶಾಪ ಹಾಕ್ತಿದ್ದಾರೆ. ಏಪ್ರಿಲ್ 10ರಂದು ನಡೆದಿರೋ ಈ ಘಟನೆಯ ವಿಡಿಯೋ ಈಗ ವೈರಲ್ ಆಗಿದೆ.

ಬಿಳಿ ಕಾರೊಂದು ದಿಢೀರನೆ ಬ್ಯುಸಿಯಾಗಿದ್ದ ರಸ್ತೆಯ ಮಧ್ಯೆ ನಿಂತುಬಿಟ್ಟಿದೆ. ಎಕ್ಸಿಟ್ ತೆಗೆದುಕೊಳ್ಳೋದನ್ನು ಮರೆತಿದ್ದ ಚಾಲಕ ಅಲ್ಲೇ ಕಾರು ಟರ್ನ್ ಮಾಡಲು ಮುಂದಾಗಿದ್ದಾನೆ. ಇದಕ್ಕಾಗಿ ದಿಢೀರನೆ ಬ್ರೇಕ್ ಹಾಕಿದ್ದಾನೆ.

ಇದರಿಂದ ರಸ್ತೆಯ ಎರಡೂ ಲೇನ್ ಗಳು ಬ್ಲಾಕ್ ಆಗಿಬಿಟ್ಟಿದ್ದವು. ಕಾರಿನ ಹಿಂಬದಿಯಲ್ಲಿ ಶರವೇಗದಲ್ಲಿ ಬರ್ತಾ ಇದ್ದ ಇತರ ವಾಹನಗಳು ಅಪಘಾತ ತಪ್ಪಿಸಲು ಹರಸಾಹಸ ಮಾಡಿವೆ. ಈ ಪ್ರಯತ್ನದಲ್ಲಿ ಲಾರಿಯೊಂದು ಪಲ್ಟಿಯಾಗಿ ಬಿದ್ದಿದೆ.

ಇನ್ನೊಂದು ವಾಹನ ಕೂಡ ಅಪಘಾತಕ್ಕೀಡಾಗುವುದರಲ್ಲಿತ್ತು. ಆದ್ರೆ ಅದೃಷ್ಟವಶಾತ್ ಮಗುಚಿಕೊಂಡಿಲ್ಲ. ಇಷ್ಟೆಲ್ಲ ಅನಾಹುತಕ್ಕೆ ಕಾರಣನಾದ ಕಾರು ಚಾಲಕ ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಕಾರನ್ನು ಟರ್ನ್ ಮಾಡಿಕೊಂಡು ಹೊರಟು ಹೋಗಿದ್ದಾನೆ.

"Whoops! Missed my exit…"

"Whoops! Missed my exit…"

Posted by Shanghaiist on Monday, April 9, 2018

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...