alex Certify
ಕನ್ನಡ ದುನಿಯಾ       Mobile App
       

Kannada Duniya

ಸಾವಿನ ಸವಾರಿಯ ವಿಶ್ವದ ಅತಿ ಎತ್ತರದ ವಾಟರ್ ಸ್ಲೈಡ್ ಸದ್ಯದಲ್ಲೇ ನೆಲಸಮ!

In this photo taken with a fisheye lens, riders go down the world's tallest water slide called "Verruckt" at Schlitterbahn Waterpark in 2014.

ವಿಶ್ವದ ಅತಿ ಎತ್ತರದ ವಾಟರ್ ಸ್ಲೈಡ್ ಎಂಬ ಗೌರವಕ್ಕೆ ಪಾತ್ರವಾಗಿದ್ದ ಕನ್ಸಸ್ ವಾಟರ್ ಪಾರ್ಕ್ ಸದ್ಯದಲ್ಲೇ ನೆಲಸಮವಾಗಲಿದೆ. ಸವಾರಿ ವೇಳೆ ಬಾಲಕನೊಬ್ಬ ಮೃತಪಟ್ಟ ಹಿನ್ನೆಲೆಯಲ್ಲಿ ವಾಟರ್ ಪಾರ್ಕ್ ಮಾಲೀಕರು ಈ ನಿರ್ಧಾರಕ್ಕೆ ಬಂದಿದ್ದಾರೆ. ಆಗಸ್ಟ್ 7 ರಂದು ಕನ್ಸಸ್ ನಗರದಲ್ಲಿರುವ ಶ್ಲಿಟ್ಟರ್ಬನ್ ಪಾರ್ಕಿನಲ್ಲಿ ಆಟವಾಡ್ತಾ ಇದ್ದ ಕಾಲೆಬ್ ಥಾಮಸ್ ಶ್ವಾಬ್ ವಾಟರ್ ಸ್ಲೈಡ್ ಸವಾರಿ ವೇಳೆ ಮೃತಪಟ್ಟಿದ್ದ. ಬಾಲಕನ ತಲೆಯೇ ಕತ್ತರಿಸಿ ಹೋಗಿತ್ತು, ಇಬ್ಬರು ಮಹಿಳೆಯರು ಈ ಅವಗಢದಲ್ಲಿ ಗಾಯಗೊಂಡಿದ್ರು.

ಈ ಬಗ್ಗೆ ಖುದ್ದು ಬಾಲಕನ ತಂದೆ ಸ್ಕಾಟ್ ಶ್ವಾಬ್ ತನಿಖೆ ನಡೆಸ್ತಾ ಇದ್ರು. ವೆರ್ರಕ್ತ್ 17 ಮಹಡಿ ಎತ್ತರದಿಂದ ಬೀಳುವ ನೀರಿನ ಜಾರು ಬಂಡಿ, 70 ಕಿಮೀ ವೇಗದಲ್ಲಿ ಸಾಗುತ್ತದೆ, 50 ಅಡಿ ಆಳದಲ್ಲಿರುವ ಸ್ವಿಮ್ಮಿಂಗ್ ಪೂಲ್ ವರೆಗೂ ಪ್ರವಾಸಿಗರನ್ನು ಕೊಂಡೊಯ್ಯುತ್ತದೆ. ನೈಲಾನ್ ಪಟ್ಟಿಯಂತಹ ಸೀಟ್ ಬೆಲ್ಟ್ ಹಾಕಿ ವಾಟರ್ ಸ್ಲೈಡ್ ನಲ್ಲಿ ಕೂರಿಸಲಾಗುತ್ತದೆ. ಕಳೆದ 50 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಇಂತಹ ಅನಾಹುತ ನಡೆದಿರಲಿಲ್ಲ. ಬಾಲಕನ ಸಾವು ವಾಟರ್ ಸ್ಲೈಡ್ ಪಾಲಿಗೆ ಕಪ್ಪುಚುಕ್ಕೆಯಾಗಿದ್ದು, ಹಾಗಾಗಿ ಅದನ್ನು ನೆಲಸಮ ಮಾಡಲು ಸಂಸ್ಥೆ ನಿರ್ಧರಿಸಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...