alex Certify
ಕನ್ನಡ ದುನಿಯಾ       Mobile App
       

Kannada Duniya

ವಿಶ್ವದ ಅತ್ಯಂತ ಎತ್ತರದ ಹೊಟೇಲ್ ನಲ್ಲಿದೆ ಇಷ್ಟೊಂದು ರೂಂ

ವಿಶ್ವದ ಅತ್ಯಂತ ಎತ್ತರದ ಹೊಟೇಲ್ ದುಬೈನಲ್ಲಿಂದು ತನ್ನ ಕಾರ್ಯ ಶುರುಮಾಡ್ತಿದೆ. ಜೆವೋರಾ ಹೆಸರಿನ ಈ ಹೊಟೇಲ್ ದುಬೈನ ಶೇಖ್ ಜಾಯೆದ ರಸ್ತೆಯ ಬಳಿ ಅಂತರರಾಷ್ಟ್ರೀಯ ಹಣಕಾಸು ಕೇಂದ್ರ ಕಚೇರಿ ಪಕ್ಕದಲ್ಲಿ ನಿರ್ಮಾಣವಾಗಿದೆ. ಇದನ್ನು ಮಜೀದ್ ಅಲ್ ಉತ್ತರ್ ನಿರ್ಮಾಣ ಮಾಡಿದ್ದಾರೆ.

ಜೆಡಬ್ಲ್ಯೂ ಮ್ಯಾರಿಯೇಟ್ ಹೊಟೇಲನ್ನು ವಿಶ್ವದ ಅತ್ಯಂತ ಎತ್ತರದ ಹೊಟೇಲ್ ಎಂದು ಕರೆಯಲಾಗ್ತಿತ್ತು. ಇದು ಕೂಡ ದುಬೈನಲ್ಲಿಯೇ ಇದೆ. ಈಗ ಜೆವೋರಾ ಹೊಟೇಲ್ ತಲೆ ಎತ್ತಿದೆ. ಅದು ಜೆಡಬ್ಲ್ಯೂ ಮ್ಯಾರಿಯೇಟ್ ಹೊಟೇಲ್ ಗಿಂತ ಎತ್ತರವಾಗಿದೆ. ಈ ಹೊಟೇಲ್ ನಲ್ಲಿ ಗ್ರಾಹಕರಿಗೆ ವಿಶೇಷ ಸೌಲಭ್ಯಗಳನ್ನು ನೀಡಲಾಗ್ತಿದೆ.

ಈ ಕಟ್ಟಡ ನೋಡಲು ಆಕರ್ಷಕವಾಗಿದೆ. ಇದು 75 ಮಹಡಿಗಳನ್ನು ಹೊಂದಿದೆ. ಇದ್ರ ಎತ್ತರ 356 ಮೀಟರ್. ಇದ್ರಲ್ಲಿ 528 ಕೋಣೆಗಳಿವೆ. ಜೆವೋರಾ ಹೊಟೇಲ್, ಜೆಡಬ್ಲ್ಯೂ ಮ್ಯಾರಿಯೇಟ್ ಹೊಟೇಲ್ ಗಿಂತ ಒಂದು ಮೀಟರ್ ಮಾತ್ರ ಹೆಚ್ಚು ಎತ್ತರದಲ್ಲಿದೆ. ಜೆಡಬ್ಲ್ಯೂ ಮ್ಯಾರಿಯೇಟ್ ಹೊಟೇಲ್ 2013ರಲ್ಲಿ ನಿರ್ಮಾಣವಾಗಿದೆ.

2020 ರಲ್ಲಿ ದುಬೈನಲ್ಲಿ ಗ್ಲೋಬಲ್ ಟ್ರೇಡ್ ಫೇರ್ ಎಕ್ಸ್ಪೋ ನಡೆಯಲಿದೆ. 20 ಲಕ್ಷ ಪ್ರವಾಸಿಗರು ಬರುವ ನಿರೀಕ್ಷೆಯಿದೆ. ಇದಕ್ಕೆ ತಯಾರಿ ಜೋರಾಗಿ ನಡೆದಿದ್ದು ಒಂದಾದ ಮೇಲೆ ಒಂದು ದೊಡ್ಡ ಕಟ್ಟಡಗಳು ತಲೆ ಎತ್ತುತ್ತಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...