alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತಷ್ಟು ವಿಳಂಬವಾಗ್ತಿದೆ ವಿಶ್ವದ ಅತಿದೊಡ್ಡ ಕಟ್ಟಡ ಕಾಮಗಾರಿ

jeddah-tower-afp_650x400_71494547700

2019ರ ವೇಳೆಗೆ ಸೌದಿ ಅರೇಬಿಯಾದಲ್ಲಿ ವಿಶ್ವದ ಅತಿ ದೊಡ್ಡ ಕಟ್ಟಡ ತಲೆಯೆತ್ತಲಿದೆ. ಈ ಜೆಡ್ಡಾ ಟವರ್ ಎತ್ತರ ಒಂದು ಕಿಲೋ ಮೀಟರ್ ಗಿಂತಲೂ (3,300 ಅಡಿ) ಅಧಿಕ. ದುಬೈನ ಬುರ್ಜ್ ಖಲೀಫಾವನ್ನು ಕೂಡ ಜೆಡ್ಡಾ ಟವರ್ ಮೀರಿಸಲಿದೆ. ಕಟ್ಟಡ ಕಾಮಗಾರಿ ಕೊಂಚ ವಿಳಂಬವಾಗಲಿದೆ ಅಂತಾ ಸೌದಿ ಅರೇಬಿಯಾದ ರಾಜಕುಮಾರ ಅಲ್ವಾಲೀದ್ ಬಿನ್ ತಲಾಲ್ ತಿಳಿಸಿದ್ದಾರೆ.

ಕೆಂಪು ಸಮುದ್ರದ ಪಕ್ಕದಲ್ಲೇ ಈ ಕಟ್ಟಡವನ್ನು ನಿರ್ಮಾಣ ಮಾಡಲಾಗ್ತಿದೆ. ಸೌದಿ ಬಿನ್ ಲಾಡೆನ್ ಗ್ರೂಪ್ ಈ ಕಟ್ಟಡ ಕಾಮಗಾರಿಯ ಗುತ್ತಿಗೆ ಪಡೆದಿದೆ. ಆದ್ರೆ 2014ರಲ್ಲಿ ತೈಲ ಕುಸಿತದಿಂದ ಕಂಪನಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು. ಅಲ್ಖೈದಾ ನಾಯಕನಾಗಿದ್ದ ಒಸಾಮಾ ಬಿನ್ ಲಾಡೆನ್ ಹುಟ್ಟುಹಾಕಿದ್ದ ಕಂಪನಿ ಇದು. ಸೌದಿಯಲ್ಲಿ ಅನೇಕ ಐತಿಹಾಸಿಕ ಕಟ್ಟಡಗಳನ್ನು ನಿರ್ಮಾಣ ಮಾಡಿದೆ.

jeddah-tower_650x400_61494548082

2011ರ ಆಗಸ್ಟ್ ನಲ್ಲೇ ಜೆಡ್ಡಾ ಟವರ್ ಕಾಮಗಾರಿ ಪೂರ್ಣಗೊಳಿಸೋದಾಗಿ ಕಂಪನಿ ಹೇಳಿತ್ತು. ಆದ್ರೀಗ 2019ರ ವೇಳೆಗೆ ಕಟ್ಟಡ ಸಂಪೂರ್ಣ ಸಿದ್ಧವಾಗಲಿದೆ ಅಂತಾ ತಿಳಿಸಿದೆ. ಜೆಡ್ಡಾ ಟವರ್ ನಲ್ಲಿ ಒಟ್ಟು 26 ಮಹಡಿಗಳು ಇರಲಿವೆ. ಈ ಕಟ್ಟಡದ ಮೇಲಿನಿಂದ ಸಮುದ್ರ ಹಾಗೂ ಇಡೀ ಜೆಡ್ಡಾ ನಗರದ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...