alex Certify
ಕನ್ನಡ ದುನಿಯಾ       Mobile App
       

Kannada Duniya

ಸೀಕ್ರೆಟ್ ಪಾರ್ಟಿಗೆ ಹೋಗಲು ಇಲ್ಲಿ ಸಾಲುಗಟ್ಟಿ ನಿಲ್ತಾರೆ ಜನ

ಜರ್ಮನಿಯ ರಾಜಧಾನಿ ಬರ್ಲಿನ್ ನಲ್ಲಿರುವ ಚಿಕ್ಕ ಡಿಸ್ಕೋ ಫೋನ್ ಬೂತನ್ನು ವಿಶ್ವದ ಅತ್ಯಂತ ಚಿಕ್ಕ ನೈಟ್ ಕ್ಲಬ್ ಎಂದು ಪರಿಗಣಿಸಲಾಗಿದೆ. ಟೆಲಿ ಡಿಸ್ಕೋ ಹೆಸರಿನ ಈ ಡಿಸ್ಕೋವನ್ನು ಜರ್ಮನಿಯ ಒಂದು ಟೆಲಿಕಾಮ್ ಕಂಪನಿ ಸಿದ್ಧಪಡಿಸಿದೆ. ಈ ಬೂತ್ ಎಷ್ಟು ಚಿಕ್ಕದಾಗಿದೆ ಎಂದರೆ ಅದರೊಳಗೆ ಇಬ್ಬರು ಮಾತ್ರ ಪ್ರವೇಶಿಸಬಹುದಾಗಿದೆ.

ಕ್ವಾಯಿನ್ ಓಪನ್ ಎಂಟ್ರಿ ಸಹಾಯದ ಮೂಲಕ ಇದರೊಳಗೆ ಪ್ರವೇಶ ಪಡೆಯಬಹುದಾಗಿದೆ. ಬರ್ಲಿನ್ ನಲ್ಲಿರುವ ಈ ಚಿಕ್ಕ ಡಿಸ್ಕೋ ಕ್ಲಬ್ ನಲ್ಲೂ ಸೀಕ್ರೆಟ್ ಪಾರ್ಟಿ ಮಾಡಲು ಬೇಕಾಗುವ ಎಲ್ಲ ವ್ಯವಸ್ಥೆ ಇದೆ.

ಒಂದು ನೈಟ್ ಕ್ಲಬ್ ನಲ್ಲಿರುವ ಎಲ್ಲ ವ್ಯವಸ್ಥೆ ಇದರಲ್ಲಿದೆ. ಸ್ಮೋಕ್ ಮಶಿನ್, ಲೈಟ್ ಇಫೆಕ್ಟ್, ಡಿಸ್ಕೋ ಬಾಲ್, ಡ್ರೈ ಐಸ್, ಟಚ್ ಸ್ಕೀನ್ ಕೂಡ ಇದೆ. ಗ್ರಾಹಕ ತನಗೆ ಬೇಕಾದ ನೆಚ್ಚಿನ ಹಾಡನ್ನು ಇಲ್ಲಿ ಹಾಕಿಕೊಳ್ಳಬಹುದು. ಸುಂದರ ಕ್ಷಣಗಳನ್ನು ಸೆರೆ ಹಿಡಿಯಲು ಕ್ಯಾಮರಾ ವ್ಯವಸ್ಥೆ ಕೂಡ ಇದೆ. ಟೆಲಿ ಡಿಸ್ಕೋಗೆ ಹೆಚ್ಚಿನ ಬೇಡಿಕೆ ಇದೆ. ಇದರಲ್ಲಿ ಕಾಲ ಕಳೆಯಲು ಜನ ಸಾಲುಗಟ್ಟಿ ನಿಲ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...