alex Certify
ಕನ್ನಡ ದುನಿಯಾ       Mobile App
       

Kannada Duniya

ಜಗತ್ತಿನ ಅತಿ ಹಿರಿಯ ವ್ಯಕ್ತಿಯ ದೀರ್ಘಾಯುಷ್ಯದ ಗುಟ್ಟೇನು ಗೊತ್ತಾ?

ಜಗತ್ತಿನ ಅತಿ ಹಿರಿಯ ನೊನಕ ಬುಧವಾರ ತನ್ನ 113 ನೇ ಜನ್ಮ ದಿನಾಚರಣೆಯನ್ನು ಆಚರಿಸಿಕೊಂಡಿದ್ದಾರೆ. ಗಿನ್ನಿಸ್‌ ವಿಶ್ವದಾಖಲೆಯ ಪ್ರಕಾರ, 113 ವರ್ಷದ ಸ್ಪೇನ್‌ನ ನ್ಯುನೆಜ್‌ ಒಲಿವೆರ ಏಪ್ರಿಲ್‌ ನಲ್ಲಿ ನಿಧನ ಹೊಂದಿದ್ದಾರೆ. ಆ ಬಳಿಕ ನೊನಕಗೆ ಅತಿ ಹಿರಿಯ ವ್ಯಕ್ತಿ ಎಂದು ಗೌರವ ನೀಡಲಾಗಿದೆ.

1931 ರಲ್ಲಿ ಮದುವೆಯಾಗಿರುವ ಸೊನಕ 5 ಮಕ್ಕಳ ತಂದೆಯಾಗಿದ್ದಾರೆ. ಇವರು ಒತ್ತಡ ರಹಿತ ಜೀವನ ಸಾಗಿಸುತ್ತಿರುವುದರಿಂದ ಇಷ್ಟು ವರ್ಷ ಬದುಕಿದ್ದಾರೆ ಎಂದು ಪುತ್ರಿ ತಿಳಿಸಿದ್ದಾರೆ. ನಿವೃತ್ತಿ ಜೀವನವನ್ನು ಸುಖಮಯವಾಗಿ ಕಳೆಯುತ್ತಿರುವ ನೊನಕ, ರಾತ್ರಿ ಊಟದ ಬಗ್ಗೆ ಚಿಂತಿಸುವುದೇ ಇಲ್ಲ. ಆಹಾರದಲ್ಲಿ ಕಟ್ಟುನಿಟ್ಟಾಗಿರುವ ಅವರು, ಬೆಳಗ್ಗೆ ಸಮಯಕ್ಕೆ ಸರಿಯಾಗಿ, ನಿಯಮಿತ ಆಹಾರ ಸೇವಿಸುತ್ತಾರಂತೆ.

ಜಪಾನ್‌ ನಲ್ಲಿ ಒಟ್ಟಾರೆ 67824 ಮಂದಿ 100 ವರ್ಷಕ್ಕಿಂತಲೂ ಅಧಿಕ ಕಾಲ ಬದುಕಿದ್ದಾರೆ. ಈ ಪೈಕಿ ಸುಮಾರು ಶೇ.88 ರಷ್ಟು ಮಂದಿ ಮಹಿಳೆಯರೇ ಆಗಿದ್ದಾರೆ. ಜಗತ್ತಿನ ಅತಿ ಹಿರಿಯ ಮಹಿಳೆ ಎಂಬ ಹೆಗ್ಗಳಿಕೆಯೂ ಜಪಾನ್‌ ನ ನಬಿ ತಜಿಮಾ ಎಂಬವರಿಗೆ ಸೇರಿತ್ತು. ಕಳೆದ ಏಪ್ರಿಲ್‌ನಲ್ಲಿ ಆಕೆ ನಿಧನವಾಗಿದ್ದು, 117 ವರ್ಷ ಬದುಕಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...