alex Certify
ಕನ್ನಡ ದುನಿಯಾ       Mobile App
       

Kannada Duniya

ಜಗತ್ತಿನ ಹಿರಿಯಜ್ಜನಿಗೆ 146 ನೇ ಹುಟ್ಟುಹಬ್ಬದ ಸಂಭ್ರಮ

old

ಇಂಡೋನೇಷ್ಯಾದ ಪುಟ್ಟ ಗ್ರಾಮವೊಂದರಲ್ಲಿ ವಾಸವಾಗಿರುವ ಎಂಬಾ ಗೋತೋ  ಜಗತ್ತಿನ ಅತ್ಯಂತ ಹಿರಿಯ ವ್ಯಕ್ತಿ ಅಂತಾ ಹೇಳಲಾಗ್ತಿದೆ. ಈಗ ಹಿರಿಯಜ್ಜನಿಗೆ 146ರ ಹರೆಯ. ಇತ್ತೀಚೆಗಷ್ಟೆ ಎಂಬಾ ಗೋತೋ 146ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

ಎಂಬಾ ಗೋತೋ ಹುಟ್ಟಿದ್ದು 1870 ರ ಡಿಸೆಂಬರ್ 31ರಂದು. ಸರ್ಕಾರಿ ದಾಖಲೆಗಳಲ್ಲೇ ಇದು ದೃಢಪಟ್ಟಿದೆ. ಎಂಬಾ ಗೋತೋಗೆ ನಾಲ್ವರು ಹೆಂಡತಿಯರಿದ್ರು, ಯಾರೂ ಈಗ ಬದುಕಿಲ್ಲ. 10 ಮಕ್ಕಳು ಕೂಡ ಈಗಾಗ್ಲೇ ಮೃತಪಟ್ಟಿದ್ದಾರೆ. ಕೊನೆಯ ಮಗ ಕಾಲವಾಗಿ 29 ವರ್ಷಗಳೇ ಕಳೆದಿವೆ.

ಮೊಮ್ಮಕ್ಕಳು, ಮರಿ ಮಕ್ಕಳೇ ಈ ಅಜ್ಜನಿಗೆ ಆಸರೆ. ತನ್ನ ಮೊಮ್ಮಗ ಮತ್ತವನ ಪತ್ನಿ ಜೊತೆ ಎಂಬಾ ಗೋತೋ ಬರ್ತಡೇ ಆಚರಿಸಿದ್ದಾರೆ. ಸದ್ಯ ಈ ಹಿರಿಯಜ್ಜನಿಗಿರುವ ಏಕೈಕ ಬಯಕೆ ಅಂದ್ರೆ ಸಾಯೋದು. 1992ರಲ್ಲೇ ಸಾಯಬೇಕು ಅಂತಾ ಅವರು ನಿರ್ಧರಿಸಿದ್ರು, ಆಗಲೇ ಸಮಾಧಿಯನ್ನೂ ಸಿದ್ಧಮಾಡಿಟ್ಟುಕೊಂಡಿದ್ದಾರೆ. ಆದ್ರೆ ಸಾವು ಅವರ ಸನಿಹಕ್ಕೂ ಸುಳಿಯುತ್ತಿಲ್ಲ. ಈಗ ಗೋತೋಗೆ ಕಣ್ಣು ಸರಿಯಾಗಿ ಕಾಣುತ್ತಿಲ್ಲ, ಊಟವನ್ನು ಕೂಡ ಯಾರಾದರೂ ತಿನ್ನಿಸಬೇಕು, ಆದ್ರೆ ಕಿವಿ ಚುರುಕಾಗಿದೆ, ರೇಡಿಯೋ ಕೇಳ್ತಾರೆ. ದೀರ್ಘಾಯುಷ್ಯದ ರಹಸ್ಯ ತಾಳ್ಮೆ ಎನ್ನುತ್ತಾರೆ ಎಂಬಾ ಗೋತೋ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...