alex Certify
ಕನ್ನಡ ದುನಿಯಾ       Mobile App
       

Kannada Duniya

ಡಯಟ್ ಮಾಡ್ತಿದ್ದಾನೆ ವಿಶ್ವದ ಧಡೂತಿ ವ್ಯಕ್ತಿ

most-obese-man_650x400_81490762542

ಮೆಕ್ಸಿಕೋದ ಜುವಾನ್ ಪೆಡ್ರೋ ಫ್ರಾಂಕೋ ಎಂಬಾತನಿಗೆ ಈಗಿನ್ನೂ 32 ವರ್ಷ ವಯಸ್ಸು. ಆದ್ರೆ ತೂಕ ಮಾತ್ರ ಬರೋಬ್ಬರಿ 595 ಕೆಜಿ. ಈತ ವಿಶ್ವದ ಅತಿ ತೂಕದ ವ್ಯಕ್ತಿ ಎನಿಸಿಕೊಂಡಿದ್ದಾನೆ. ಇವನ ತೂಕ ಇಳಿಸಲೆಂದೇ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಲು ಮುಂದಾಗಿದ್ದಾರೆ. ಮೇ 9ರಂದು ಜುವಾನ್ ಪೆಡ್ರೋಗೆ ಶಸ್ತ್ರಚಿಕಿತ್ಸೆ ಮಾಡಲು ಸಮಯ ನಿಗದಿಪಡಿಸಲಾಗಿದೆ.

ಸರ್ಜರಿಗಾಗಿ ಜುವಾನ್ ನನ್ನು ವೈದ್ಯರು ಸಜ್ಜುಗೊಳಿಸುತ್ತಿದ್ದಾರೆ. ಇದಕ್ಕಾಗಿ ಆತ 3 ತಿಂಗಳು ಡಯಟ್ ಮಾಡ್ತಿದ್ದಾನೆ. ಕನಿಷ್ಟ 175 ಕೆಜಿ ತೂಕ ಇಳಿಸಿದ್ರೆ ಜುವಾನ್ ಗೆ ಶಸ್ತ್ರಚಿಕಿತ್ಸೆ ಮಾಡಬಹುದು ಅಂತಾ ವೈದ್ಯರು ತಿಳಿಸಿದ್ದಾರೆ. ಆರಂಭಿಕ ತೂಕದಲ್ಲಿ ಶೇ.30ರಷ್ಟನ್ನು ಜುವಾನ್ ಈಗಾಗ್ಲೇ ಕಳೆದುಕೊಂಡಿದ್ದಾನಂತೆ. ಹಾಗಾಗಿ ಆತನಿಗೆ ಬ್ಯಾರಿಯಾಟ್ರಿಕ್ ಸರ್ಜರಿ ಮಾಡಬಹುದು ಎನ್ನುತ್ತಾರೆ ವೈದ್ಯರು.

ನವೆಂಬರ್ ನಲ್ಲಿ ಜುವಾನ್ ಆಸ್ಪತ್ರೆಗೆ ದಾಖಲಾಗಿದ್ದ. ಆತನಿಗೆ ಮಧುಮೇಹ ಸೇರಿದಂತೆ ಹಲವು ಬಗೆಯ ಆರೋಗ್ಯ ಸಮಸ್ಯೆಗಳಿದ್ದಿದ್ದರಿಂದ ತಕ್ಷಣಕ್ಕೆ ಸರ್ಜರಿ ಮಾಡುವುದು ಸಾಧ್ಯವಿರಲಿಲ್ಲ. ಬ್ಯಾರಿಯಾಟ್ರಿಕ್ ಸರ್ಜರಿ ಮೂಲಕ ಜುವಾನ್ ನ ಶೇ.50ರಷ್ಟು ತೂಕ ಕಡಿಮೆ ಮಾಡಲು ವೈದ್ಯರು ಮುಂದಾಗಿದ್ದಾರೆ. ನಂತರ ಇನ್ನೊಂದು ಶಸ್ತ್ರಚಿಕಿತ್ಸೆಯ ಅಗತ್ಯ ಬರಬಹುದೆಂದು ವೈದ್ಯರು ತಿಳಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...