alex Certify
ಕನ್ನಡ ದುನಿಯಾ       Mobile App
       

Kannada Duniya

ಲಂಡನ್ ನಲ್ಲಿ ತಯಾರಾಗಿದೆ ವಿಶ್ವದ ಅತಿ ದೊಡ್ಡ ಸಮೋಸಾ

ವಿಶ್ವದ ಅತಿ ದೊಡ್ಡ ಸಮೋಸಾ ಲಂಡನ್ ನಲ್ಲಿ ತಯಾರಾಗಿದೆ. ಈ ಸಮೋಸಾದ ತೂಕ 153.1 ಕೆಜಿ. ಏಷ್ಯಾದ ಜನಪ್ರಿಯ ತಿನಿಸಾಗಿರೋ ಸಮೋಸಾವನ್ನು ಮುಸ್ಲಿಂ ಏಡ್ ಯುಕೆ ಚಾರಿಟಿಯ ಸ್ವಯಂ ಸೇವಕರು ತಯಾರಿಸಿದ್ದಾರೆ. ಈ ಸಮೋಸಾ ಗಿನ್ನಿಸ್ ದಾಖಲೆಯ ಹೊಸ್ತಿಲಲ್ಲಿದೆ.

ಈ ಹಿಂದೆ 2012ರಲ್ಲಿ ಇಂಗ್ಲೆಂಡ್ ನ ಬ್ರಾಡ್ ಫೋರ್ಡ್ ಕಾಲೇಜಿನಲ್ಲಿ ವಿಶ್ವದ ಅತಿ ದೊಡ್ಡ ಸಮೋಸಾ ತಯಾರಿಸಲಾಗಿತ್ತು. ಅದರ ತೂಕ 110.8 ಕೆಜಿ ಇತ್ತು. ಆ ದಾಖಲೆಯನ್ನು ಭಾರೀ ತೂಕದ ಈ ಸಮೋಸಾ ಮುರಿದು ಹಾಕಿದೆ.

ಸಮೋಸಾ ತಯಾರಿಕೆಯನ್ನು ಆಯೋಜಿಸಿದ್ದ 26 ವರ್ಷದ ಫರೀದ್ ಇಸ್ಲಾಂ ಹೊಸ ದಾಖಲೆಯೇ ನಿರ್ಮಾಣವಾಗಿರೋದ್ರಿಂದ ಫುಲ್ ಖುಷಿಯಾಗಿದ್ದಾರೆ. ಗಿನ್ನಿಸ್ ದಾಖಲೆ ತೀರ್ಪುಗಾರರು ಕೆಲವೊಂದು ನಿಯಮಗಳನ್ನು ವಿಧಿಸಿದ್ದರು.

ಸಮೋಸಾವನ್ನು ಅದಕ್ಕೆ ತಕ್ಕಂತೆಯೇ ತಯಾರು ಮಾಡಲಾಗಿದೆ. ಈ ಸಮೋಸಾ ತಯಾರಿಸಲು 15 ಗಂಟೆ ಸಮಯ ತಗುಲಿದೆ. ತೀರ್ಪುಗಾರರ ಪರೀಕ್ಷೆ ಬಳಿಕ ಸಮೋಸಾವನ್ನು ಕತ್ತರಿಸಿ ಬಡವರಿಗೆ ಹಂಚಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...