alex Certify
ಕನ್ನಡ ದುನಿಯಾ       Mobile App
       

Kannada Duniya

ವಿಶ್ವದ ಅತಿ ದೊಡ್ಡ ಫೋಟೋ ಹೇಗಿದೆ ಗೊತ್ತಾ…?

ಯುರೋಪಿನ ಆಲ್ಫ್ಸ್ ಪರ್ವತದ ಮೇಲೆ ತೆಗೆದಿರುವ ಈ ಫೋಟೋ ವಿಶ್ವದ ಅತಿ ದೊಡ್ಡ ಫೋಟೋಗ್ರಫಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಇದನ್ನು ಪ್ರಿಂಟ್ ಹಾಕಿದರೆ ಒಂದು ಸಾಕರ್ ಮೈದಾನದಷ್ಟು ದೊಡ್ಡದಾಗಿರುತ್ತದೆ ಎಂದು ಹೇಳಲಾಗಿದೆ.

ಖ್ಯಾತ ಫೋಟೋಗ್ರಾಫರ್ ಫಿಲಿಪೋ ನೇತೃತ್ವದ ಅಂತರಾಷ್ಟ್ರೀಯ ಫೋಟೋಗ್ರಾಫರ್ ಗಳ ತಂಡ ಮೈ ಮರಗಟ್ಟುವ -14 ಡಿಗ್ರಿ ಚಳಿಯಲ್ಲಿ ಸತತ ಎರಡು ವಾರಗಳ ಕಾಲ ಆಲ್ಫ್ಸ್ ಪರ್ವತದ ತುತ್ತ ತುದಿಯಲ್ಲಿ ಕಳೆದು ಇಂತದೊಂದು ಸುಂದರ ಫೋಟೋ ತೆಗೆದಿದೆ.

ಈ ಮೊದಲು 2012 ರಲ್ಲಿ ಲಂಡನ್ ನಲ್ಲಿ ತೆಗೆದಿದ್ದ ಬಿಟಿ ಟವರ್ ನ ಫೋಟೋವೇ ದೊಡ್ಡದೆಂದು ಪರಿಗಣಿಸಲಾಗಿದ್ದು, ಬಳಿಕ ಫೋಟೋಗ್ರಾಫರ್ ಫಿಲಿಪೋ ಮತ್ತವರ ತಂಡ ಆಲ್ಫ್ಸ್ ಪರ್ವತದ ಮೇಲೆ ತೆಗೆದಿರುವ ಫೋಟೋ ಆ ದಾಖಲೆಗೆ ಭಾಜನವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...