alex Certify
ಕನ್ನಡ ದುನಿಯಾ       Mobile App
       

Kannada Duniya

ಏರ್ ಲ್ಯಾಂಡರ್-10 ಪರೀಕ್ಷಾರ್ಥ ಹಾರಾಟದ ವೇಳೆ ತಪ್ಪಿದ ದುರಂತ

LONGEST AIRCRAFT

ವಿಶ್ವದ ಅತಿ ಉದ್ದದ ವಿಮಾನ ಏರ್ ಲ್ಯಾಂಡರ್ 10 ವಾಯುನೌಕೆಯ ಪರೀಕ್ಷಾರ್ಥ ಹಾರಾಟ ವಿಫಲವಾಗಿದೆ. ಬೆಡ್ ಫೋರ್ಡ್ ಶೈರ್ ನಲ್ಲಿ ಅದು ಪರೀಕ್ಷಾರ್ಥ ಹಾರಾಟದ ಬಳಿಕ ಅಪಘಾತಕ್ಕೀಡಾಗಿ ಭೂ ಸ್ಪರ್ಷ ಮಾಡಿದೆ ಅಂತಾ ಬ್ರಿಟನ್ ನ ತಯಾರಕ ಕಂಪನಿ ಹೈಬ್ರಿಡ್ ಏರ್ ವೆಹಿಕಲ್ಸ್ ತಿಳಿಸಿದೆ.

6 ಡಬಲ್ ಡೆಕ್ಕರ್ ಬಸ್ ಗಳಿಗಿಂತ್ಲೂ ಉದ್ದವಾದ ವಾಯುನೌಕೆ ಇದು. ಅಪಘಾತದಲ್ಲಿ ವಾಯುನೌಕೆಗೆ ಕೊಂಚ ಹಾನಿಯಾಗಿದೆ. ಆದ್ರೆ ಒಳಗಡೆ ಇದ್ದ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. 92 ಮೀಟರ್ ಉದ್ದದ ಏರ್ ಲ್ಯಾಂಡರ್ 10 ಈ ತಿಂಗಳ ಆರಂಭದಲ್ಲಿ ಮೊದಲ ಬಾರಿ ಪರೀಕ್ಷಾರ್ಥ ಹಾರಾಟ ನಡೆಸಿತ್ತು. ಹೀಲಿಯಂ ತುಂಬಿದ ಈ ಬೃಹತ್ ವಾಯುನೌಕೆ 2 ವಾರಗಳ ಕಾಲ ವಾಯುಗಾಮಿಯಾಗಿ ಉಳಿಯಲಿದೆ ಎಂಬ ಭರವಸೆ ಹೈಬ್ರಿಡ್ ಏರ್ ವೆಹಿಕಲ್ಸ್ ಕಂಪನಿಗಿತ್ತು. ಇದು 48 ಪ್ರಯಾಣಿಕರನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿದೆ.

ಇದು ಲಂಬವಾಗಿ ಟೇಕ್ ಆಫ್ ಮತ್ತು ಲ್ಯಾಂಡಿಂಗ್ ಮಾಡಬಲ್ಲದು. ಇದಕ್ಕೆ ರನ್ ವೇ ಅಗತ್ಯವಿಲ್ಲ. ಮುಕ್ತ ಜಾಗದಲ್ಲಿ, ಮರುಭೂಮಿಯಲ್ಲಿ, ಮಂಜುಗಡ್ಡೆ ಮೇಲೆ ಮತ್ತು ನೀರಿನಲ್ಲೂ ಕಾರ್ಯನಿರ್ವಹಿಸಬಲ್ಲದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...