alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ವೀಡನ್ ನಲ್ಲಿ ಸಿದ್ದವಾಗಿದೆ ವಿಶ್ವದ ಮೊದಲ ಚಾರ್ಜಿಂಗ್ ರಸ್ತೆ…!

ರಸ್ತೆ ಮೇಲೆ ಓಡಾಡುವ ವಾಹನಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ನಿಧಾನಗತಿಯಲ್ಲಿ ಏರುತ್ತಿದೆ. ಮುಂದಿನ ಎರಡು ದಶಕಗಳಲ್ಲಿ ಎಲೆಕ್ಟ್ರಿಕ್ ವಾಹನ ಅನ್ನೋದು ಕಾಮನ್ ಆಗುತ್ತೆ.

ಹೀಗಾಗಿ ಎಲೆಕ್ಟ್ರಿಕ್ ವಾಹನ ಚಲಿಸುತ್ತಿರುವಂತೆಯೇ ಚಾರ್ಜ್ ಮಾಡಬಹುದಾದ ವಿಶ್ವದ ಮೊದಲ ರಸ್ತೆಯನ್ನು ಸ್ವೀಡನ್ ನಲ್ಲಿ ನಿರ್ಮಿಸಲಾಗಿದೆ.

ಹೌದು….ಎಲೆಕ್ಟ್ರಿಕ್ ವಾಹನಗಳು ಹೆಚ್ಚತೊಡಗಿದಂತೆ ಅದಕ್ಕೆ ತಕ್ಕಂತ ಚಾರ್ಜಿಂಗ್ ವ್ಯವಸ್ಥೆಯೂ ಬೇಕಾಗುತ್ತೆ. ಅದಕ್ಕಾಗಿಯೇ ಸ್ವೀಡನ್ ನಲ್ಲಿ 2 ಕಿ ಮೀ ಉದ್ದದ ರಸ್ತೆಯನ್ನು ಚಾರ್ಜಿಂಗ್ ರಸ್ತೆಯನ್ನಾಗಿ ಮಾರ್ಪಡಿಸಲಾಗಿದೆ.

ಈ ರಸ್ತೆಯ ಮೇಲೆ ವಿದ್ಯುತ್ ವ್ಯವಸ್ಥೆ ಹೊಂದಿರುವ ಎರಡು ಟ್ರ್ಯಾಕ್ ಇದ್ದು, ಎಲೆಕ್ಟ್ರಿಕ್ ಕಾರ್ ಅಡಿಯಲ್ಲಿ ಅಳವಡಿಸಲಾಗುವ ತಿರುಗಬಲ್ಲ ಸಾಧನದ ಮೂಲಕ, ವಾಹನ ಚಲಿಸುವಾಗಲೇ ಚಾರ್ಜ್ ಆಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...