alex Certify
ಕನ್ನಡ ದುನಿಯಾ       Mobile App
       

Kannada Duniya

20 ಗಂಟೆ ನಿರಂತರ ಹಾರಬಲ್ಲ ವಿಶ್ವದ ಮೊದಲ ಫ್ಲೈಟ್‌ನಲ್ಲಿ ಏನೇನಿದೆ ಗೊತ್ತಾ?

ವಿಶ್ವದ ಮೊತ್ತ ಮೊದಲ ಸತತ 20 ಗಂಟೆ ಹಾರಾಟ ನಡೆಸಬಲ್ಲ ವಿಮಾನ 2022 ರಲ್ಲಿ ಟೇಕ್‌ ಆಫ್‌ ಆಗಲಿದೆ. ವಿಶೇಷ ಎಂದರೆ, ಈ ವಿಮಾನದಲ್ಲಿ ಮಲಗಲು ಬರ್ತ್‌ಗಳ ವ್ಯವಸ್ಥೆ ಇರಲಿದ್ದು, ವ್ಯಾಯಾಮ ಕೊಠಡಿ(ಜಿಮ್‌) ಸಹ ಒಳಗೊಂಡಿದೆ.

ಸಿಡ್ನಿಯಿಂದ ಲಂಡನ್‌ಗೆ ಟೇಕ್‌ ಆಫ್‌ ಆಗಲಿರುವ ಈ ವಿಮಾನ, ಅತ್ಯಂತ ದೂರದ ಪ್ರಯಾಣಕ್ಕಾಗಿ ಅಗತ್ಯವಾದ ಮೂಲಸೌಕರ್ಯಗಳನ್ನು ಕಲ್ಪಿಸುತ್ತಿದೆ. 300 ಪ್ರಯಾಣಿಕರನ್ನು ಹೊತ್ತೊಯ್ಯಲಿರುವ ಪ್ರಾಜೆಕ್ಟ್ ಸನ್‌ರೈಸ್‌ ವಿಮಾನ, ಸಿಡ್ನಿಯಿಂದ ಲಂಡನ್‌ಗೆ ನೇರವಾಗಿ ಸಾಗಲಿದೆ. ಸುದೀರ್ಘ ಪ್ರಯಾಣಕ್ಕೆ ಬೇಕಾಗುವಷ್ಟು ಇಂಧನ ತುಂಬಿಸಲು ಎಂಜಿನಿಯರ್‌ಗಳು ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದು, ಇದರಲ್ಲಿ ಯಶಸ್ವಿಯಾಗಿದ್ದಾರೆ.

ಕ್ವಾಂಟಾಸ್‌ ಏರ್ವೇಸ್‌ ಸಂಸ್ಥೆ ಈ ಸಾಧನೆಗೆ ಮುಂದಾಗಿದ್ದು, ಪ್ರಾಜೆಕ್ಟ್ ಸನ್‌ರೈಸ್‌ ಎಂದು ಯೋಜನೆಗೆ ಹೆಸರಿಟ್ಟಿದೆ. ಒಂದು ವೇಳೆ ಲ್ಯಾಡಿಂಗ್‌ ವೇಳೆ ವಿಳಂಬ ಸೇರಿದಂತೆ 20 ಗಂಟೆಗೂ ಹೆಚ್ಚು ಕಾಲ ಆಗಸದಲ್ಲಿ ಇರಬಹುದಾದ ಸಾಮರ್ಥ್ಯವನ್ನು ವಿಮಾನ ಹೊಂದಿದೆ ಎಂದು ಸಂಸ್ಥೆ ಹೇಳಿದೆ. ಉತ್ತರ ಹಾಗೂ ದಕ್ಷಿಣ ಅಮೇರಿಕಾ ಮತ್ತು ಯುರೋಪ್‌, ಆಫ್ರಿಕಾದಿಂದ ಆಸ್ಟ್ರೇಲಿಯಾದ ಪ್ರಮುಖ ಸಿಟಿಗಳಿಗೆ ಇವು ಸಂಪರ್ಕ ಕಲ್ಪಿಸಲಿದೆ.

ಕ್ವಾಂಟಸ್‌ ಸಿಇಒ ಅಲನ್‌ ಜೋಯ್ಸ್‌, ಇಂತಹ ಯೋಜನೆ ನಿರ್ಮಾಣ ಮಾಡುವುದಾಗಿ ಬೋಯಿಂಗ್‌ ಜತೆ ಚಾಲೆಂಜ್‌ ಹಾಕಿದ್ದರು. ಅತ್ಯಂತ ಆರಾಮದಾಯಕ ಹಾಗೂ ಅಗತ್ಯ ಸೌಕರ್ಯಗಳುಳ್ಳ ವಿಮಾನ ತಯಾರಿಸುವುದಾಗಿ ಬ್ಲೂಮ್‌ಬರ್ಗ್‌ನ ಸಂದರ್ಶನದಲ್ಲಿ ಹೇಳಿದ್ದರು.

Related News

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...