alex Certify
ಕನ್ನಡ ದುನಿಯಾ       Mobile App
       

Kannada Duniya

43 ವರ್ಷದಲ್ಲಿ ಸಾವನ್ನಪ್ಪಿದ ವಿಶ್ವದ ಅತ್ಯಂತ ಹಿರಿಯ ಜೇಡ

ವಿಶ್ವದ ಅತ್ಯಂತ ಹಿರಿಯ ಜೇಡ ಸಾವನ್ನಪ್ಪಿದೆ. ಆಸ್ಟ್ರೇಲಿಯಾ ವಿಜ್ಞಾನಿಗಳ ಪ್ರಕಾರ, ಬೇರೆ ಪ್ರಾಣಿಯೊಂದು ಕಚ್ಚಿದ್ದರಿಂದ, 43 ವರ್ಷದ ಜೇಡ ಸಾವನ್ನಪ್ಪಿದೆಯಂತೆ. ವಿಜ್ಞಾನಿಗಳು ಈ ಜೇಡಕ್ಕೆ ನಂಬರ್ -16 ಎಂದು ಹೆಸರಿಟ್ಟಿದ್ದಾರೆ. ಪಶ್ಚಿಮ ಆಸ್ಟ್ರೇಲಿಯಾದ ವಿಜ್ಞಾನಿಗಳು 1974ರಿಂದ ಈ ಜೇಡವನ್ನು ಗಮನಿಸುತ್ತಿದ್ದರು.

ಇದಕ್ಕೂ ಮೊದಲು ಹೆಚ್ಚು ವರ್ಷ ಬದುಕಿದ ಜೇಡ ಎಂಬ ದಾಖಲೆ ಮೆಕ್ಸಿಕೋದ ಸಾಕು ಜೇಡ ಟಾರೆಂಟ್ಯುಲಾ ಹೆಸರಿನಲ್ಲಿತ್ತು. ಈ ದಾಖಲೆಯನ್ನು ನಂಬರ್ -16 ಜೇಡ ಮುರಿದಿದೆ. 15 ವರ್ಷ ಹೆಚ್ಚು ಕಾಲ ಬದುಕಿದೆ. ಒಂದೇ ಸ್ಥಳದಲ್ಲಿ ನಂಬರ್ -16 ಜೇಡ ವಾಸವಾಗಿದ್ದರಿಂದ ಇಷ್ಟು ವರ್ಷ ಬದುಕಲು ಸಾಧ್ಯವಾಯ್ತಂತೆ.

ಫೆಸಿಫಿಕ್ ಜೀವಶಾಸ್ತ್ರ ಜನರಲ್ ನಲ್ಲಿ ಈ ಜೇಡದ ಬಗ್ಗೆ ಮಾಹಿತಿ ನೀಡಲಾಗಿದೆ. ಈ ನಂಬರ್ -16 ಜೇಡ ಹಿಂದಿನ ಅಕ್ಟೋಬರ್ ನಲ್ಲಿ ಸಾವನ್ನಪ್ಪಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...