alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಕಂಪನಿಗಳು ನೀಡೋ ಫುಡ್ ನೋಡಿದ್ರೆ ಬಾಯಲ್ಲಿ ನೀರೂರತ್ತೆ

google

ದೊಡ್ಡ ದೊಡ್ಡ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಕ್ಯಾಂಪಸ್ ಆವರಣದಲ್ಲೇ ಕ್ಯಾಂಟೀನ್ ಸೌಲಭ್ಯ ನೀಡುತ್ತವೆ. ಕೆಲವು ಕಂಪನಿಗಳು ಉಚಿತವಾಗಿ ಆಹಾರ ನೀಡಿದರೆ ಮತ್ತೆ ಕೆಲ ಕಂಪನಿಗಳಲ್ಲಿ ಡಿಸ್ಕೌಂಟ್ ದರದಲ್ಲಿ ಆಹಾರ ದೊರೆಯುತ್ತದೆ.

ಆದರೆ ಬಹಳಷ್ಟು ಉದ್ಯೋಗಿಗಳು ತಮ್ಮ ಕಂಪನಿ ಕ್ಯಾಂಟೀನ್ ನಲ್ಲಿ ಸಿಗುವ ಆಹಾರದ ಗುಣಮಟ್ಟದ ಕುರಿತು ಅಸಮಾಧಾನ ಹೊಂದಿರುತ್ತಾರೆ. ಜೊತೆಗೆ ಪ್ರತಿ ದಿನ ಒಂದೇ ರೀತಿಯ ಆಹಾರ ನೀಡಲಾಗುತ್ತದೆ ಎಂದು ಗೊಣಗುತ್ತಿರುತ್ತಾರೆ.

ಆದರೆ ವಿಶ್ವದ ಖ್ಯಾತನಾಮ ಕಂಪನಿಗಳಾದ ಫೇಸ್ ಬುಕ್, ಗೂಗಲ್, ಆಪಲ್, ಟ್ವಿಟ್ಟರ್ ನ ಕ್ಯಾಂಟೀನ್ ಗಳಲ್ಲಿ ಸಿಗುವ ಆಹಾರ ಪದಾರ್ಥಗಳ ವಿವರ ಕೇಳಿದ್ರೆ ನಿಮ್ಮ ಬಾಯಲ್ಲಿ ನೀರು ಬರುವುದು ಗ್ಯಾರಂಟಿ.

facebook

ಗೂಗಲ್ ನ ಕೆಫೆಟೇರಿಯಾಗಳಲ್ಲಿ ಫಾಸ್ಟ್ ಫುಡ್, ಸ್ನಾಕ್ಸ್ ಜೊತೆಗೆ ಕೂಲ್ ಡ್ರಿಂಕ್ಸ್ ಇದ್ದರೆ, ಆಪಲ್ ತನ್ನ ನೌಕರರಿಗೆ ಮೆಕ್ಸಿಕನ್, ಇಟಾಲಿಯನ್, ಜಪಾನ್, ಸ್ಪಾನೀಶ್ ಹಾಗೂ ಫ್ರೆಂಚ್ ಫುಡ್ ಜೊತೆಗೆ ಐಸ್ ಕ್ರೀಮ್, ಜ್ಯೂಸ್ ಕೂಡಾ ನೀಡುತ್ತದೆ.

ಫೇಸ್ ಬುಕ್, ಅಮೆರಿಕನ್ ಮತ್ತು ಏಷ್ಯಾದ ಫುಡ್ ನೀಡುತ್ತದೆ. ಜೊತೆಗೆ ಗೆಸ್ಟ್ ಗಳು ಬಂದರೆ ಅವರಿಗೆ ರಿಯಾಯಿತಿ ದರದಲ್ಲಿ ಈ ಆಹಾರ ಪದಾರ್ಥ ಸಿಗುತ್ತದೆ. ಇನ್ನೂ ಟ್ವಿಟ್ಟರ್ ಕೂಡಾ ತನ್ನ ಉದ್ಯೋಗಿಗಳಿಗೆ ಉತ್ತಮ ಗುಣಮಟ್ಟದ ಆಹಾರ ನೀಡುತ್ತದೆ. ಈ ಎಲ್ಲ ಕಂಪನಿಗಳು ಆಯಾ ದೇಶಕ್ಕೆ ಅನುಗುಣವಾಗಿ ಆಹಾರದ ಮೆನುವಿನಲ್ಲಿ ಬದಲಾವಣೆ ಮಾಡಿಕೊಳ್ಳುತ್ತವೆ.

apple

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...