alex Certify
ಕನ್ನಡ ದುನಿಯಾ       Mobile App
       

Kannada Duniya

ತಲೆಗೆ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ ವಿಶ್ವಪ್ರಸಿದ್ಧ ಶೆಫ್

_88024702_88024701

ವಿಶ್ವದಲ್ಲಿಯೇ ಅತ್ಯುತ್ತಮ ಬಾಣಸಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಬೆನೋಯ್ಟ್ ವಯೋಲಿಯರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 44 ವರ್ಷ ವಯಸ್ಸಿನ ಬೆನೋಯ್ಟ್ ಸ್ವಿಟ್ಜರ್ ಲೆಂಡ್ ನಲ್ಲಿ ನಡೆಸುತ್ತಿದ್ದ ದಿ ಹೋಟೆಲ್ ಡಿ ವಿಲ್ಲೆ ರೆಸ್ಟೋರೆಂಟ್ ವಿಶ್ವದ ಅತ್ಯುತ್ತಮ ಹೋಟೆಲ್ ಎಂದು ಗುರುತಿಸಲ್ಪಟ್ಟಿತ್ತು.

2015ರ ಡಿಸೆಂಬರ್ ನಲ್ಲಿ ಅವರ ಹೋಟೆಲ್ ಜಗತ್ತಿನ 48 ಅತ್ಯುತ್ತಮ ಹೋಟೆಲ್ ಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಫ್ರಾನ್ಸ್ ನಲ್ಲಿ ಜನಿಸಿದ ಬೆನೋಯ್ಟ್ ವಯೋಲಿಯರ್ ಎರಡು ವರ್ಷಗಳ ಹಿಂದೆ ಸ್ವಿಟ್ಜರ್ ಲೆಂಡ್ ಪೌರತ್ವವನ್ನು ಪಡೆದಿದ್ದರು. 2013ರಲ್ಲಿ ವರ್ಷದ ಅತ್ಯುತ್ತಮ ಬಾಣಸಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಅವರು ಸ್ವಿಟ್ಜರ್ ಲೆಂಡ್ ನಲ್ಲಿರುವ ತಮ್ಮ ಮನೆಯಲ್ಲಿಯೇ ತಲೆಗೆ ಪಿಸ್ತೂಲ್ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಬೆನಾಯ್ಟ್ ಸಾವನ್ನಪ್ಪಿರುವ ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಅವರ ಕುಟುಂಬದ ಹಿತದೃಷ್ಟಿಯಿಂದ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದಾರೆ ಎನ್ನಲಾಗಿದೆ. ಕಳೆದ 6 ತಿಂಗಳ ಹಿಂದೆ ಬೆನೋಯ್ಟ್ ಅವರ ಗುರು ಫಿಲಿಪ್ ರೋಚಟ್ ಮೃತಪಟ್ಟಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...