alex Certify
ಕನ್ನಡ ದುನಿಯಾ       Mobile App
       

Kannada Duniya

ವಿಶ್ವದ ಅತ್ಯಂತ ಹಿರಿಯಜ್ಜಿ ಆರೋಗ್ಯದ ಗುಟ್ಟು..

pic963

ಹಿಂದಿನ ವರ್ಷ ಜಪಾನ್ ನ ಮಿಸಾವೋ ವೋಕಾವಾ ಎಂಬ ಮಹಿಳೆಗೆ ವಿಶ್ವದ ಅತ್ಯಂತ ಹಿರಿಯ ಮಹಿಳೆ ಎಂಬ ಬಿರುದು ಸಿಕ್ಕಿತ್ತು. ಮಿಸಾವೋ ಸಾವನ್ನಪ್ಪುವ ಮುನ್ನವೇ ಈ ಬಿರುದು ನೀಡಲಾಗಿತ್ತು. ಆಕೆ ಏಪ್ರಿಲ್ 1, 2015ರಲ್ಲಿ ಸಾವನ್ನಪ್ಪಿದ್ದು, ಆಗ ಆಕೆ ವಯಸ್ಸು 117 ವರ್ಷವಾಗಿತ್ತು. ಆದ್ರೆ ಅರ್ಜೆಂಟೀನಾದಲ್ಲಿ ಆಕೆಗಿಂತ ಹಿರಿಯ ಜೀವವೊಂದಿದೆ.

ಅರ್ಜೆಂಟೀನಾದ ಸೆಲಿನಾ ಡೇಲ್ ಎಂಬಾಕೆಗೆ 119 ವರ್ಷ ವಯಸ್ಸಾಗಿದೆಯಂತೆ. 1897, ಫೆಬ್ರವರಿ 15 ರಂದು ಆಕೆ ಜನಿಸಿದ್ದಾಳಂತೆ. ತನ್ನ ಆರೋಗ್ಯದ ಬಗ್ಗೆ ಮಾತನಾಡುವ ಸೆಲಿನಾ, ಜೀವನ ಕ್ರಮವನ್ನು ತಿಳಿಸಿದ್ದಾಳೆ. ಸರಿಯಾದ ಸಮಯದಲ್ಲಿ ಆಕೆ ಆಹಾರ ತೆಗೆದುಕೊಳ್ಳುತ್ತಾಳಂತೆ.

ತನ್ನ ಮಗನ ಜೊತೆ ಜೀವನ ಸಾಗಿಸುತ್ತಿರುವ ಸೆಲಿನಾಗೆ ಪ್ರತಿ ತಿಂಗಳು 105 ಪೌಂಡ್ ಪೆನ್ಶನ್ ಸಿಗುತ್ತೆ. ಮೊದಲು ಹಳ್ಳಿಯಲ್ಲಿ ವಾಸಿಸ್ತಿದ್ದಳಂತೆ. ಮದುವೆ ನಂತರ 1960ರಲ್ಲಿ ಪತಿ ಜೊತೆ ನಗರಕ್ಕೆ ಬಂದಿದ್ದಾಳೆ ಸೆಲಿನಾ. ಆದ್ರೆ ಕೆಲವೇ ವರ್ಷದಲ್ಲಿ ಆಕೆ ಪತಿ ಸಾವನ್ನಪ್ಪಿದನಂತೆ.  ಆಕೆ ಎಂದೂ ಸ್ಮೋಕ್ ಮಾಡಿಲ್ಲವಂತೆ. ಸದಾ ಖುಷಿಯಾಗಿರುವುದೇ ಆಕೆಯ ಜೀವನದ ಗುಟ್ಟು ಎನ್ನುತ್ತಾನೆ ಮಗ. ಪ್ರೀತಿಸುವವರ ಜೊತೆ ಕಾಲ ಕಳೆಯುವ ಸೆಲಿನಾ ತನ್ನ 11 ಸಹೋದರ, ಸಹೋದರಿಯರನ್ನು ಕಳೆದುಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...