alex Certify
ಕನ್ನಡ ದುನಿಯಾ       Mobile App
       

Kannada Duniya

ನೀವು ಹೋದಲ್ಲೆಲ್ಲ ತಾನಾಗೇ ಬರುತ್ತೆ ಈ ಸೂಟ್ ಕೇಸ್

suitcase

ಎಲ್ಲಿಗಾದ್ರೂ ಹೊರಟರೆ ನಮ್ಮ ಲಗೇಜ್ ಹೊರುವುದೇ ಕಷ್ಟದ ಕೆಲಸ. ಆದ್ರೆ ಇನ್ಮೇಲೆ ಆ ತಲೆನೋವಿಲ್ಲ, ನೀವು ಹೋದಲ್ಲೆಲ್ಲ ಸೂಟ್ ಕೇಸ್ ಬರುತ್ತೆ, ನೀವದನ್ನು ಹೊತ್ತುಕೊಂಡು ಹೋಗಬೇಕಾಗಿಯೂ ಇಲ್ಲ. ಯಾಕಂದ್ರೆ ಇದು ವಿಶ್ವದ ಮೊಟ್ಟ ಮೊದಲ ಹ್ಯಾಂಡ್ಸ್ ಫ್ರೀ ಸೂಟ್ ಕೇಸ್. ಇದನ್ನು ರೋಬೋಟಿಕ್ ಸೂಟ್ ಕೇಸ್ ಅಂತಾನೂ ಕರೆಯುತ್ತಾರೆ.

ನೀವು ಎಲ್ಲಿಗೆ ಹೋದ್ರೂ ಗಂಟೆಗೆ 10.9 ಕಿಮೀ ವೇಗದಲ್ಲಿ ಈ ಸೂಟ್ ಕೇಸ್ ನಿಮ್ಮೊಂದಿಗೆ ನಡೆಯಬಲ್ಲದು. ಈ ಸೂಟ್ ಕೇಸ್ ಅನ್ನು ಲಂಬವಾಗಿ ಮತ್ತು ಅಡ್ಡಲಾಗಿ ಇಡಬಹುದು. ಇದರಲ್ಲಿ ಶಬ್ದ ನಿಯಂತ್ರಿತ ಮೋಟಾರ್ ಇರುವುದರಿಂದ ನಿಮ್ಮನ್ನು ಅನುಸರಿಸುವ ವೇಳೆ ಶಬ್ಧವಾಗುವುದಿಲ್ಲ. ನಯವಾಗಿರಲಿ, ಒರಟಾಗಿರಲಿ ಎಲ್ಲಾ ಕಡೆ ಈ ಸೂಟ್ ಕೇಸ್ ತೆರಳಬಲ್ಲದು.

ಅಷ್ಟೇ ಅಲ್ಲ ಈ ಸೂಟ್ ಕೇಸ್ ಮೇಲೆ ನಿಮ್ಮ ಇನ್ನೊಂದು ಬ್ಯಾಗನ್ನು ಕೂಡ ಇಟ್ಟು ನೀವು ಕೈಬೀಸಿಕೊಂಡು ಆರಾಮಾಗಿ ನಡೆಯಿರಿ, ಅದು ನಿಮ್ಮ ಹಿಂದೆ ಬರುತ್ತದೆ. ಮೊಬೈಲ್ ಚಾರ್ಜ್ ಮಾಡಿದಂತೆ ಅದಕ್ಕೂ ಚಾರ್ಜಿಂಗ್ ನ ಅವಶ್ಯಕತೆ ಇದೆ, ಯುಎಸ್ ಬಿ ಪೋರ್ಟ್ ಕೂಡ ಕನೆಕ್ಟ್ ಆಗಿರಲಿ. ರಸ್ತೆ ಮಧ್ಯೆ ಏನಾದ್ರೂ ಅಡ್ಡ ಬಂದ್ರೆ ಡೈರೆಕ್ಷನ್ ಕೂಡ ಚೇಂಜ್ ಮಾಡಬಹುದು. ಟ್ರಾವೆಲ್ ಮೇಕ್ಸ್ ರೋಬೋಟಿಕ್ಸ್ ಇದನ್ನು ವಿನ್ಯಾಸ ಮಾಡಿದೆ. ಈ ಸೂಟ್ ಕೇಸ್ ನ ಬೆಲೆ 399 ಡಾಲರ್ ಅಂದ್ರೆ ಅಂದಾಜು 26,000 ರೂಪಾಯಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...