alex Certify
ಕನ್ನಡ ದುನಿಯಾ       Mobile App
       

Kannada Duniya

ಈಕೆ ವಿಶ್ವದ ಅತ್ಯಂತ ಅಪಾಯಕಾರಿ ಮಹಿಳೆ

girll

ಅಮೆರಿಕಾದ ಎರಿಕ್ ಕಫಿಯನ್ನು ವಿಶ್ವದ ಅತ್ಯಂತ ಅಪಾಯಕಾರಿ ಮಹಿಳೆ ಎನ್ನಲಾಗ್ತಾ ಇದೆ. ತನ್ನ 16 ನೇ ವಯಸ್ಸಿನಲ್ಲಿಯೇ ಕುಟುಂಬದ ಎಲ್ಲ ಸದಸ್ಯರನ್ನು ಕೊಲೆ ಮಾಡಿರುವ ಎರಿಕ್ ಕಳೆದ 8 ವರ್ಷಗಳಿಂದ ಜೈಲಿನಲ್ಲಿದ್ದಾಳೆ.

ನಿವೃತ್ತ ನ್ಯಾಯಾಧೀಶ ಪಿಯರ್ಸ್ ಮಾರ್ಗನ್ ಇತ್ತೀಚೆಗೆ ಎರಿಕ್ ಸಂದರ್ಶನ ನಡೆಸಿದ್ದರು. ಕಿಲ್ಲರ್ ಲೇಡಿಸ್ ಎಂಬ ಹೊಸ ಟಿವಿ ಶೋಗಾಗಿ ಈ ಸಂದರ್ಶನ ನಡೆಸಲಾಗಿದೆ. ಈ ವೇಳೆ ಅವರು ವಿಶ್ವದ ಅತ್ಯಂತ ಅಪಾಯಕಾರಿ ಮಹಿಳೆ ಈಕೆ ಎಂದಿದ್ದಾರೆ. 2008 ರಿಂದ ಎರಿಕ್ ಜೈಲಿನಲ್ಲಿದ್ದಾಳೆ. ತನ್ನ 16 ನೇ ವಯಸ್ಸಿನಲ್ಲಿಯೇ ಆಕೆ ತಾಯಿ, ಇಬ್ಬರು ಸಹೋದರರನ್ನು ಹತ್ಯೆಗೈದಿದ್ದಾಳೆ.

ಜೈಲಿನೊಳಗೆ ಹೋದ ಪಿಯರ್ಸ್ ಸ್ವಲ್ಪ ನರ್ವಸ್ ಆಗಿದ್ದರಂತೆ. ಮುದ್ದಿನಂತ ಹುಡುಗಿ ಹತ್ಯೆ ಮಾಡಲು ಹೇಗೆ ಸಾಧ್ಯ ಎಂಬ ಚಿಂತೆ ಅವರನ್ನು ಕಾಡಿತ್ತಂತೆ. ಆದ್ರೆ ಎಷ್ಟೋ ದುಷ್ಟರನ್ನು ಭೇಟಿ ಮಾಡಿದ್ದ ಪಿಯರ್ಸ್ ಗೆ ಎರಿಕ್ ಬಹಳ ಅಪಾಯಕಾರಿ ಮಹಿಳೆಯಂತೆ ಕಂಡಿದ್ದಾಳಂತೆ. ಕುಟುಂಬದವರನ್ನು ಹತ್ಯೆಗೈದಿದ್ದರೂ 24 ವರ್ಷದ ಎರಿಕ್ ಗೆ ಯಾವುದೇ ಪಶ್ಚಾತಾಪವಿಲ್ಲವಂತೆ.

ತನ್ನ 59ನೇ ವಯಸ್ಸಿನಲ್ಲಿ ಈಕೆ ಜೈಲಿನಿಂದ ಹೊರಬರಲಿದ್ದಾಳೆ. ಈಗಲೂ ಆಕೆ ತಂದೆ, ಮಗಳನ್ನು ಭೇಟಿಯಾಗಲು ಜೈಲಿಗೆ ಬರ್ತಾರಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...