alex Certify
ಕನ್ನಡ ದುನಿಯಾ       Mobile App
       

Kannada Duniya

ವಿಶ್ವ ದಾಖಲೆಗಾಗಿ ಇವರು ಮಾಡಿದ ಸಾಹಸ ಬೆರಗಾಗಿಸುತ್ತದೆ !

5959IndiaTve37ef2_skydivingವಿಶ್ವ ದಾಖಲೆ ಮಾಡಲು ಮನುಷ್ಯರು ಎಂತಹ ಸಾಹಸಕ್ಕೂ ಸೈ ಎಂಬುದನ್ನು ಈ 164 ಮಂದಿ ನಿರೂಪಿಸಿದ್ದಾರೆ. ಆಗಸದಲ್ಲಿ ಇವರು ಮಾಡಿದ ಸಾಹಸ ನೋಡಿದರೆ ನೀವೂ ಬೆರಗಾಗುತ್ತೀರಿ.

ಅಮೆರಿಕಾದ ಇಲಿನಾಯ್ಸ್ ಆಗಸದಲ್ಲಿ 164 ಮಂದಿ ಸ್ಕೈ ಡೈವರ್ ಗಳು ಹೂವಿನಾಕಾರದಲ್ಲಿ ಗುಂಪು ರಚಿಸಿದ್ದಾರೆ. ಆ ವೇಳೆ ಇವರುಗಳು ಭೂಮಿಯಿಂದ ಬರೋಬ್ಬರಿ 19,700 ಅಡಿಗಳ ಎತ್ತರದಲ್ಲಿ ಈ ಆಕಾರ ನಿರ್ಮಿಸಿದ್ದಾರೆ. ಸ್ವಲ್ಪವೂ ವ್ಯತ್ಯಾಸವಾಗದಂತೆ ಇದನ್ನು ಸಾಧಿಸಲು 13 ಪ್ರಯತ್ನಗಳನ್ನು ನಡೆಸಿದ್ದು, ಅಂತಿಮವಾಗಿ ಸಫಲರಾಗಿದ್ದಾರೆ.

2012 ರಲ್ಲಿ 138 ಮಂದಿ ಸ್ಕೈ ಡೈವರ್ ಗಳು ಮಾಡಿದ್ದ ದಾಖಲೆ ಈಗ ನುಚ್ಚು ನೂರಾಗಿದೆ. ಅಷ್ಟು ಎತ್ತರದಲ್ಲಿ ಏಳು ವಿಮಾನಗಳಿಂದ ಜಿಗಿದ ಇಷ್ಟು ಮಂದಿ ಪರಸ್ಪರ ಕೈ ಹಿಡಿದುಕೊಂಡು ಕೆಲ ಸೆಕೆಂಡುಗಳ ಕಾಲ ಹೂವಿನಾಕಾರ ರಚಿಸಿದ್ದಾರೆ. ಬಳಿಕ ಬೇರೆ ಬೇರೆಯಾಗಿ ತಮ್ಮ ಪ್ಯಾರಾಚೂಟ್ ತೆರೆದು ಸುರಕ್ಷಿತವಾಗಿ ಭೂಮಿಗಿಳಿದಿದ್ದಾರೆ. ಇಷ್ಟು ಮಂದಿಯ ಪೈಕಿ ಒಬ್ಬೇ ಒಬ್ಬ ಸ್ವಲ್ಪ ವ್ಯತ್ಯಾಸ ಮಾಡಿದ್ದರೂ ಕಠಿಣವಿತ್ತೆನ್ನಲಾಗಿದ್ದು, ಕರಾರುವಕ್ಕಾಗಿ ತಮ್ಮ ಸಾಧನೆ ಮಾಡಿದ ಬಳಿಗ ಈಗ ವಿಶ್ವ ದಾಖಲೆಗೆ ಪಾತ್ರರಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...